Ticker

6/recent/ticker-posts

Ad Code

ಎಣ್ಮಕಜೆಯಲ್ಲಿ ಎಲ್ ಡಿಎಫ್ ,ಯುಡಿಎಫ್ ಒಳ ಒಪ್ಪಂದಕ್ಕೆ ಭಾಜಪ ಉತ್ತರಿಸಲಿದೆ - ವಿಜಯ ಕುಮಾರ್ ರೈ


ಪೆರ್ಲ : ಎಣ್ಮಕಜೆ ಪಂಚಾಯತಿನಲ್ಲಿ ಎಲ್ ಡಿಎಫ್ ,ಯುಡಿಎಫ್ ಒಳ ಒಪ್ಪಂದ ಮೂಲಕ ಆಡಳಿತ ನಡೆಸುವ ಸಂಚಿಗೆ ಈ ಬಾರಿಯ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಭಾಜಪ ಅಭ್ಯರ್ಥಿಗಳು ಗೆಲುವಿನ ಮೂಲಕ ಉತ್ತರಿಸಲಿದ್ದಾರೆ ಎಂದು ಬಿಜೆಪಿ ಕೋಝಿಕ್ಕೋಡು ವಲಯ ಉಪಾಧ್ಯಕ್ಷ ವಿಜಯ ಕುಮಾರ್ ರೈ ತಿಳಿಸಿದರು. ಅವರು ಎಣ್ಮಕಜೆ ಪಂ. ಭಾಜಪ ಕನ್ವೆನ್ಷನ್ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರವನ್ನಳುವ ಮೋದಿಜೀಯವರು ಹಲವಾರು ಜನಪರ ಯೋಜನೆಗಳನ್ನು ಕೈಗೊಂಡಿದ್ದು ಅದನ್ನು ಜನ ಸ್ವೀಕರಿಸಿದ್ದಾರೆ. ಆದ್ದರಿಂದ ಮತದಾರರು ಬದಲಾವಣೆ ನಿರೀಕ್ಷಿಸುತ್ತಿದ್ದು ಪಂಚಾಯತು ಚುನಾವಣೆಯಲ್ಲಿ ಅದು ಬಿಜೆಪಿಯ ಪರ ಪ್ರತಿಫಲಿಸಲಿದೆ ಎಂದರು. ಭಾ.ಜ‌.ಪ.ಪಂಚಾಯತ್ ಅಧ್ಯಕ್ಷ ರಮಾನಂದ ಎಡಮಲೆ ಅಧ್ಯಕ್ಷತೆವಹಿಸಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷೆ ಆಶ್ವಿನಿ ಎಂ.ಎಲ್. ಜಿಲ್ಲಾಕೋರ್ಡಿನೇಟರ್ ಸೆಲ್ ಕನ್ವಿನರ್ ವಿ.ಕೆ.ಸಜಿವನ್,ಮಂಡಲಾಧ್ಯಕ್ಷ ಸುನಿಲ್ ಜಿ‌.ಅನಂತಪುರ, ಜಿಲ್ಲಾ ಉಪಾಧ್ಯಕ್ಷ ಮುರಳಿಧರ ಯಾದವ್,ಒಬಿಸಿ ಮೋರ್ಚಾದ ದಯಾನಂದ ಕುಲಾಲ್, ಎಸ್.ಸಿ‌.ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ್,ಮಂಡಲ ಪ್ರ.ಕಾರ್ಯದರ್ಶಿ ಕೆ.ಪಿ.ಅನಿಲ್ ಕುಮಾರ್  ಮೊದಲಾದವರು ಉಪಸ್ಥಿತರಿದ್ದರು.ಪಂ.ಸಮಿತಿ ಪ್ರಧಾನ ಕಾರ್ಯದರ್ಶಿ ಪತ್ತಡ್ಕ ರಾಧಾಕೃಷ್ಣ ಭಟ್ ಸ್ವಾಗತಿಸಿ ಮಂಡಲ ಕಾರ್ಯದರ್ಶಿ ಸುಮಿತ್ ರಾಜ್ ವಂದಿಸಿದರು‌.

Post a Comment

0 Comments