Ticker

6/recent/ticker-posts

Ad Code

ಮುಂಬೈಯಲ್ಲಿ ವ್ಯಾಪಾರಿಯಾಗಿರುವ ತಳಂಗರೆ ನಿವಾಸಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಮೃತ್ಯು


 ಕಾಸರಗೋಡು: ಮುಂಬೈಯಲ್ಲಿ ವ್ಯಾಪಾರಿಯಾಗಿದ್ದ ತಳಂಗರೆ ನಿವಾಸಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟ ಘಟನೆ ನಡೆದಿದೆ. ತಳಂಗರೆ ನಿವಾಸಿ ಹಾಗೂ ಅಣಂಗೂರು ಸ್ಕೌಟ್ ಭವನ ಬಳಿ ವಾಸಿಸುವ ಕೆ.ಎಂ.ಅಬ್ದುಲ್ಲ(62) ಮೃತಪಟ್ಟ ವ್ಯಕ್ತಿ. ಇಂದು (ಸೋಮವಾರ) ಮುಂಜಾನೆ 1.20 ರ ವೇಳೆ ಅಜ್ಮೀರಕ್ಕೆ ಸಾಗುವ ಮರುಸಾಗರ್ ಎಕ್ಸ್ ಪ್ರೆಸ್ ತಳಂಗರೆ ಮಾಲಿಕ್ ದೀನಾರ್ ಮಸೀದಿ ಸಮೀಪದ ಮೇಲ್ಸೇತುವೆ ಬಳಿ ತಲುಪಿದಾಗ ಇವರು ಹೊರಕ್ಕೆಸೆಯಲ್ಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಅನಂತರ ಈ ದಾರಿಯಲ್ಲಿ ಸಾಗಿದ ಗೂಡ್ಸ್ ರೈಲಿನ ಲೋಕೋ ಪೈಲಟ್  ರೈಲು ನಿಲ್ದಾಣ ಅಧಿಕೃತರಿಗೆ  ಈ ಮಾಹಿತಿಯನ್ನು  ನೀಡಿದರು. ಕೂಡಲೇ ರೈಲ್ವೇ ಪೊಲೀಸರು ಆಗಮಿಸು ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆ ಮೃತಪಟ್ಟಿದ್ದರು. ಕಾಸರಗೋಡಿನಲ್ಲಿ ರೈಲಿನಿಂದ ಇಳಿಯಲು ಬಾಗಿಲು ಹತ್ತಿರ ನಿಂತಿದ್ದಾಗ ಹೊರಕ್ಕೆಸೆಯಲ್ಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಮೃತರು ಪತ್ನಿ ಮರಿಯಾಂಬಿ, ಮಕ್ಕಳಾದ ಕಲಂದರ್ ಷಾ, ಶಹನಾಸ್, ಶಬ್ನ, ರಹೀಸ, ರುಪ್ಸ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments