ಕಳವುಗೈದ ಕಾರಿನಲ್ಲಿ 12 ವರ್ಷದ ಬಾಲಕನನ್ನು ಅಪಹರಣಗೈಯ್ಯಲು ಯತ್ನಿಸಿದ ಕಾಸರಗೋಡು ನಿವಾಸಿಯನ್ನು ಕೋಜಿಕ್ಕೋಡುವಿನಲ್ಲಿ ಬಂಧಿಸಲಾಗಿದೆ. ಕಾಸರಗೋಡು ನಿವಾಸಿ ಸಿನಾನ್ ಅಲಿ ಯೂಸುಫ್(33) ಬಂಧಿತ ಆರೋಪಿ. ಕೋಜಿಕ್ಕೋಡು ಪಯ್ಯಾನಿಕಲ್ ನಲ್ಲಿ ನಿನ್ನೆ (ಮಂಗಳವಾರ) ಈ ಘಟನೆ ನಡೆದಿದೆ.
ಬೀಚ್ ಆಸ್ಪತ್ರೆ ಬಳಿ ಟ್ಯಾಕ್ಸಿ ಸ್ಟಾಂಡ್ ಬಳಿಯಿಂದ ಈತ ಕಾರು ಕಳವುಗೈದಿದ್ದ. ಅನಂತರ ಮದ್ರಸ ಬಿಟ್ಟು ಮನೆಗೆ ಬರುತ್ತಿದ್ದ ಬಾಲಕನನ್ನು ಬಲವಂತವಾಗಿ ಕಾರಿಗೆ ಹತ್ತಿಸಲು ಯತ್ನಿಸಿದ್ದಾನೆ. ಬಾಲಕನ ಕೈ ಹಿಡಿದೆಳೆದರೂ ಕಾರಿಗೆ ಹತ್ತದೆ ನಿಂತಿದ್ದಾಗ ಸ್ಥಳೀಯರು ಆಗಮಿಸಿ ಆರೋಪಿಯನ್ನು ಹಿಡಿದಿಟ್ಟು ಪೊಲೀಸರಿಗೆ ಹಸ್ತಾಂತರಿಸಿದರು
0 Comments