Ticker

6/recent/ticker-posts

Ad Code

ಬಾಲಕನಿಗೆ ಕಿರುಕುಳ, ಬಾಲಕಿಗೆ ಕೀಟಲೆ; ಆದೂರಿನಲ್ಲಿ ಪೋಕ್ಸೋ ಪ್ರಕರಣದಂತೆ ಇಬ್ಬರ ಸೆರೆ


 ಮುಳ್ಳೇರಿಯ: ಪೋಕ್ಸೊ ಕಾಯ್ದೆಯಂತೆ ಇಬ್ಬರು ಆರೋಪಿಗಳನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಬೆಳ್ಳೂರಿನ ಮೀನು ವ್ಯಾಪಾರಿ ರಫೀಖ್(45), ಈಶ್ವರಮಂಗಲ, ಮೈಂದನಡ್ಕ ನಿವಾಸಿ ನಸೀರ್(42( ಬಂಧಿತ ಆರೋಪಿಗಳು. 16 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ರಫೀಖ್ ಸೆರೆಯಾಗಿದ್ದಾನೆ. ಶಾಲೆಯ ನಡೆದ ಕೌನ್ಸಿಲಿಂಗ್ ವೇಳೆ ಬಾಲಕ ತನಗೆ ಕಿರುಕುಳ ನೀಡಿದ ಬಗ್ಗೆ ಹೇಳಿದ್ದು ಅದರಂತೆ ಪೊಲೀಸರು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. 16 ವರ್ಷದ ಬಾಲಕಿ‌ ಮದ್ರಸಾದಿಂದ ಮನೆಗೆ‌ ಮರಳುತ್ತಿದ್ದ ವೇಳೆ ಸ್ಕೂಟರಿನಲ್ಲಿ ಬರುವಂತೆ ಬಲವಂತಪಡಿಸಿದ ಪ್ರಕರಣದಲ್ಲಿ ನಸೀರ್ ಸೆರೆಯಾಗಿದ್ದಾನೆ. ಬಾಲಕಿ ಮನೆಯಲ್ಲಿ ಬಂದು ವಿಷಯ ತಿಳಿಸಿದ್ದು ಮನೆಯವರ ಹಾಗೂ ಬಾಲಕಿಯ ಹೇಳಿಕೆ ಪಡೆದ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ

Post a Comment

0 Comments