ಕಾಸರಗೋಡು: ಮಗನ ಅಗಲುವಿಕೆಯ ನಂತರ ಖಿನ್ನತೆಗೆ ಒಳಗಾಗಿದ್ದ ಮದ್ಯವಯಸ್ಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ದೇಳಿ ಕುನ್ನುಪಾರ ನಿವಾಸಿ ದಾಮೋದರನ್(52) ನೇಣು ಬಿಗಿದು ಆತ್ಮಹತ್ಯೆಗೈದ ವ್ಯಕ್ತಿ. ಇಂದು (ಶನಿವಾರ) ಬೆಳಗ್ಗೆ ಇವರ ಮೃತದೇಹ ಮನೆ ಬಳಿಯ ಜನವಾಸವಿಲ್ಲದ ಮನೆಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ದಾಮೋದರನ್ ರವರ ಪುತ್ರ ಧನುಷ್(27) ಕಳೆದ ಅಗೋಸ 31 ರಂದು ನೇಣು ಬಿಗಿದು ಆತ್ಮಹತ್ಯೆಗೈದಿದ್ದನು. ಮಗನ ನಿಧನದ ಸುದ್ದಿ ತಿಳಿದ ನಂತರ ನಾಪತ್ತೆಯಾಗಿದ್ದ ದಾಮೋದರನ್ ರನ್ನು ಮೇಲ್ಪರಂಬ ಪೊಲೀಸರು ಕಾಸರಗೋಡು ರೈಲು ನಿಲ್ದಾಣದ ಬಳಿಯಿಂದ ಪತ್ತೆಹಚ್ಚಿ ತಂದಿದ್ದರು. ಮೃತರು ಪತ್ನಿ ಗೀತಾ, ಮಕ್ಕಳಾದ ಧನ್ಯ ದೀಕ್ಷಿತ್ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ

0 Comments