ಬದಿಯಡ್ಕ: ಪರ್ಮಿಟ್ ನವೀಕರಿಸದ ಹಿನ್ನೆಲೆಯಲ್ಲಿ ಬಸ್ಸು ಯಾನ ಮೊಟಕುಗೊಂಡಿದ್ದು ಸಾರ್ವಜನಿಕರು ಸಂಕಷ್ಟಕ್ಕೀಡಾದ ಘಟನೆ ನಡೆದಿದೆ. ಕಾಸರಗೋಡಿನಿಂದ ಬದಿಯಡ್ಕ ದಾರಿಯಾಗಿ ವಿದ್ಯಾಗಿರಿ- ಮುನಿಯೂರು ಮೂಲಕ ಏತಡ್ಕ ಸಾಗುವ ಮೂಕಾಂಬಿಕಾ ಬಸ್ಸಿಗೆ ಈ ಅವಸ್ಥೆ ಉಂಟಾಗಿದೆ. ಊರವರ ಬಹು ಕಾಲದ ಒತ್ತಾಯದ ಹಿನ್ನೆಲೆಯಲ್ಲಿ ಈ ಹಿಂದೆ ಕರ್ತವ್ಯದಲ್ಲಿದ್ದ ಆರ್.ಟಿ.ಒ.ರವರು ಬಸ್ಸಿಗೆ ತಾತ್ಕಾಲಿಕ ಪರ್ಮಿಟ್ ಮಂಜೂರು ಮಾಡಿದ್ದರು. ಪರ್ಮಿಟ್ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮಾಲಕರು ಬಸ್ಸಿನ ಯಾನ ಮೊಟಕುಗೊಳಿಸಿದ್ದಾರೆ. ಪರ್ಮಿಟ್ ನವೀಕರಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ದೂರು ಉಂಟಾಗಿದೆ
ಇದರಿಂದಾಗಿ ಈ ಭಾಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಈ ಬಸ್ಸಿಗೆ ಪರ್ಮಿಟ್ ಮಂಜೂರು ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದರು

0 Comments