Ticker

6/recent/ticker-posts

Ad Code

ಶಬರಿಮಲೆಯಿಂದ ಕಳವುಗೈದ 400 ಗ್ರಾಂ ಚಿನ್ನ ಬಳ್ಳಾರಿಯ ಚಿನ್ನದಂಗಡಿಯಿಂದ ವಶ, ಮುಂದುವರಿದ ಎಸ್.ಐ.ಟಿ. ತನಿಖೆ.


 ಪತ್ತನಂತಿಟ್ಟ: ಶಬರಿಮಲೆಯಿಂದ ಕಳವುಗೈದು ಮಾರಾಟ ಮಾಡಲ್ಪಟ್ಟ 400 ಗ್ರಾಂ ಚಿನ್ನವನ್ನು ಕರ್ಣಾಟಕದ ಬಳ್ಳಾರಿಯಿಂದ ವಶಪಡಿಸಲಾಗಿದೆ. ಬಂಧಿತ ಆರೋಪಿ ಉಣ್ಣಿಕೃಷ್ಣನ್ ಪೋಟ್ಟಿ ಅವರ ಹೇಳಿಕೆಯಂತೆ ಬಳ್ಳಾರಿಯ ಗೋವರ್ಧನ ಎಂಬವರ ರೊದ್ದಂ ಜುವೆಲ್ಲರಿಯಿಂದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.  ಉಣ್ಣಿಕೃಷ್ಣನ್ ಪೋಟ್ಟಿ ತನಗೆ ಚಿನ್ನ ನೀಡಿರುವುದು ನಿಜವೆಂದು ಗೋವರ್ಧನ ಒಪ್ಪಿಕೊಂಡಿದ್ದಾರೆ

ವಿಶೇಷ ತನಿಖಾ ತಂಡದ (ಎಸ್.ಐ.ಟಿ) ಎಸ್.ಪಿ.ಶಶಿಧರನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಶಬರಿಮಲೆಯಿಂದ ಒಟ್ಟು 476 ಗ್ರಾಂ ಚಿನ್ನ ಕಳವುಗೀಡಾಗಿತ್ತು. ಶಬರಿಮಲೆಯ ದ್ವಾರಪಾಲಕ, ಗರ್ಭಗುಡಿಯ ಬಾಗಲಿನ ದಾರಂದ ಎಂಬಿವುಗಳಿಗೆ ಲೇಪಿಸಿದ ಚಿನ್ನ ಕಳವುಗೀಡಾಗಿತ್ತು. ಈ ಪ್ರಕರಣದಲ್ಲಿ ದೇವಸ್ವಂ  ಅಧಿಕಾರಿ ಮುರಾರಿ ಬಾಬು ಎಂಬಾತನನ್ನು ಬಂಧಿಸಲಾಗಿದೆ. ವಿಶೇಷ ತನಿಖಾ ತಂಡದ ತನಿಖೆ ಮುಂದುವರಿಯುತ್ತಿದೆ

Post a Comment

0 Comments