ಉಕ್ಕಿನಡ್ಕ:,ಕಾಲು ಸಂಕ ಮುರಿದು ಬಿದ್ದಿದ್ದು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆಂದು ತಿಳಿದು ಬಂದಿದೆ. ಬದಿಯಡ್ಕ ಗ್ರಾಮ ಪಂಚಾಯತು 5 ನೇ ವಾರ್ಡು (ಹೊಸ 9 ನೇ ವಾರ್ಡು) ನೆಲ್ಲಿಕುಂಜೆ ಗುತ್ತು ಎಂಬಲ್ಲಿ ನಿರ್ಮಿಸಿದ್ದ ಕಾಲು ಸಂಕ ಮುರಿದು ಬಿದ್ದಿದೆ.
2000-2005 ನೇ ಕಾಲಾವಧಿಯಲ್ಲಿ ಈ ಕಾಲು ಸಂಕ ನಿರ್ಮಿಸಲಾಗಿತ್ತು. ತೋಡಿನ ಬದಿಯ ತಡೆಗೋಡೆ ಮುರಿದು ಬಿದ್ದು ಮೇಲಿನ ಸ್ಲಾಬ್ ನೆಲಕಚ್ಚಿದೆ. ಇದರಿಂದಾಗಿ ನೆಲ್ಲಿಕುಂಜೆ, ಕಜಂಪಾಡಿ ಸಹಿತ ವಿವಿದ ಪ್ರದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪ್ರದೇಶದಿಂದ ಉಕ್ಕಿನಡ್ಕ, ಕಾಟುಕುಕ್ಕೆ, ಪೆರ್ಲ, ಬದಿಯಡ್ಕ, ನೀರ್ಚಾಲು ಸಹಿತ ವಿವಿದ ಶಿಕ್ಷಣ ಕೇಂದ್ರಗಳಿಗೆ ಸಾಗುವ ಮಕ್ಕಳು ಸಹ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಲು ಸಂಕ ಮುರಿದು ಬಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಹಿರಿಯರು ಸುತ್ತಿ ಬಳಸಿ ಸಾಗಬೇಕಾದ ಸ್ಥಿತಿ ಉಂಟಾಗಿದೆ. ಪಂಚಾಯತು ಅಧಿಕೃತರು ಈ ಕಾಲು ಸಂಕ ನಿರ್ಮಿಸಲು ನಿಧಿ ಮಂಜೂರು ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ


0 Comments