Ticker

6/recent/ticker-posts

Ad Code

ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನ ಭೂಮಿಪೂಜೆ ಹಾಗೂ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ಸಂಪನ್ನ


 ಮುಂಡಿತ್ತಡ್ಕ : ಅತೀ ಪುರಾತನವಾದ ಹಾಗೂ ಪ್ರಕೃತಿ ರಮಣೀಯ ಕಾರಣಿಕ ಕ್ಷೇತ್ರವಾದ ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಂಗವಾಗಿ   ಭೂಮಿಪೂಜೆ  ಶ್ರೀ ಸುಬ್ರಾಯ ದೇವರ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ಜರಗಿತು.  

ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಆಶೀರ್ವಚನಗೈಯುತ್ತಾ ಪ್ರಾಚೀನ ದೇವಾಲಯಗಳೇ ನಮ್ಮ ದೇಶದ ಸಂಸ್ಕೃತಿ, ಪರಂಪರೆಯ ಬೇರುಗಳು. ಅವನ್ನೆಲ್ಲಾ ಹಿಂದೆ ಮತೀಯ ಧ್ವೇಷದಿಂದ ಧ್ವಂಸಗೖದು ನಾಶಗೊಳಿಸಿದ್ದರೂ ಇತ್ತೀಚಿಗೆ ದೇಶದಾದ್ಯಂತ ಪ್ರಾಚೀನ ದೇಗುಲಗಳೆಲ್ಲ ಮತ್ತೆ ಜೀರ್ಣೋದ್ಧಾರಗೊಂಡು ಶೋಭಿಸುತ್ತಿದೆ. ಇದು ಹಿಂದೂ ಸಮಾಜದ ಅಭಿವೃದ್ಧಿಯ ಸೂಚಕ ಎಂದು  ನುಡಿದರು.

ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದು, ಆಶೀರ್ವಚನ ನೀಡಿ ಗ್ರಾಮ ದೇವಾಲಯಗಳು ನಾಡಿನ ಹೃದಯವಾಗಿದೆ ಎಂದರು.

ಹೃದಯ ಕೆಟ್ಟರೆ ಮತ್ತೆ ಉಸಿರೇ ಇಲ್ಲ. ಆದ್ದರಿಂದ ಗ್ರಾಮದ ದೇವಾಲಯ ಬೆಳಗಿದರೆ ಮಾತ್ರವೇ ನಾಡು ಸುಭಿಕ್ಷವಾಗಿರುತ್ತದೆ ಎಂದರು.ಮುಗು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೆಂಕಟ್ರಮಣ ಭಟ್ ಪಳ್ಳ ಅಧ್ಯಕ್ಷತೆ ವಹಿಸಿದರು.ದಾನಿ, ಉದ್ಯಮಿಗಳಾದ ಇ. ಎಸ್. ಮಹಾಬಲೇಶ್ವರ ಭಟ್ ಎಡಕ್ಕಾನ, ಶಿವಶಂಕರ ನೆಕ್ರಾಜೆ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಸಂತ ಪೖ ಬದಿಯಡ್ಕ, ಕನಿಲ ಭಗವತಿ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕಡಪ್ಪರ, ದೇಲಂಪಾಡಿ ಕ್ಷೇತ್ರ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ದಾಮೋದರ ಡಿ, ಬಾಲಕೃಷ್ಣ ರೖ ಕಿನ್ನಿಮಜಲು, ದೖವಜ್ಞರಾದ ಕುಂಞಿಕೖಷ್ಣ ಬಾರೆ, ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಉದಯಶಂಕರ ಭಟ್ ಕರೋಡಿ, ಪವಿತ್ರಪಾಣಿ ಸುರೇಶ್ಚಂದ್ರ ರಾವ್, ಪದ್ಮನಾಭ ಆಚಾರ್ಯ ಬಾಡೂರು ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು.


ಸಮಾರಂಭದಲ್ಲಿ  ಉದ್ಯಮಿ ಇ. ಎಸ್. ಮಹಾಬಲೇಶ್ವರ ಭಟ್ ಎಡಕ್ಕಾನ ಅವರನ್ನು ಷಣ್ಮುಖ ಮಿತ್ರವೃಂದ ಮತ್ತು ಮಹಿಳಾ ವೃಂದದ ವತಿಯಿಂದ ಗೌರವಿಸಲಾಯಿತು.

ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಕರ್ಮಿಕತ್ವದಲ್ಲಿ ಭೂಮಿ ಪೂಜೆ ಮತ್ತು ಶಿಲಾಮಯ ಗರ್ಭಗುಡಿಗೆ ಶಿಲಾನ್ಯಾಸ ನಡೆಯಿತು. ಈ ಸಂದರ್ಭ ಊರ ಭಕ್ತಾದಿಗಳು ಪಾಲ್ಗೊಂಡರು.ಆಡಳಿತ ಸಮಿತಿ ಅಧ್ಯಕ್ಷ ರವೀಂದ್ರ ನಾಯಕ್ ಶೇಣಿ ಪ್ರಾಸ್ತಾವಿಕ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರಾಮಕುಮಾರ್ ಎಂ. ಸ್ವಾಗತಿಸಿ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರಸಾದ್ ರೈ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments