Ticker

6/recent/ticker-posts

Ad Code

ನಾಳೆ (ನ.17) ಕೇರಳ ವಿದ್ಯುತ್ ವೈರ್‍ಮ್ಯಾನ್ ಮತ್ತು ಮೇಲ್ವಿಚಾರಕರ ಸಂಘದ ಜಿಲ್ಲಾ ಸಮ್ಮೇಳನ


ಕುಂಬಳೆ: ಕೇರಳ ವಿದ್ಯುತ್ ವೈರ್‍ಮ್ಯಾನ್ ಮತ್ತು ಮೇಲ್ವಿಚಾರಕರ ಸಂಘ (ಕೆ.ಇ.ಡಬ್ಲ್ಯು.ಎಸ್.ಎ) ರಾಜ್ಯ ಸಮ್ಮೇಳನದ ಭಾಗವಾಗಿ ಕಾಸರಗೋಡು ಜಿಲ್ಲಾ ಸಮ್ಮೇಳನ ಸೋಮವಾರ ಕುಂಬಳೆ ಶ್ರೀ ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘಟಕರು ಕುಂಬಳೆಯಲ್ಲಿ ಶುಕ್ರವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನದ ಅಂಗವಾಗಿ ಮೆರವಣಿಗೆ, ಪ್ರತಿನಿಧಿ ಸಮ್ಮೇಳನ, ಸನ್ಮಾನ, ವೈರಿಂಗ್ ಮತ್ತು ಪ್ಲಂಬಿಂಗ್ ಉತ್ಪನ್ನಗಳ ಪ್ರದರ್ಶನ ಮತ್ತು ಪರಿಹಾರ ನೆರವು ವಿತರಣೆ ನಡೆಯಲಿದೆ.

ಪ್ರತಿನಿಧಿ ಸಮ್ಮೇಳನವನ್ನು ರಾಜ್ಯ ಅಧ್ಯಕ್ಷ ಪಿ.ವಿ. ರಾಜೇಶ್ ಉದ್ಘಾಟಿಸುವರು. ಇತರ ರಾಜ್ಯ ಮತ್ತು ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ.

ಆಧುನಿಕ ವೈರಿಂಗ್ ಮತ್ತು ಪ್ಲಂಬಿಂಗ್ ಸಾಮಗ್ರಿಗಳ ಪ್ರದರ್ಶನವು ಸಾರ್ವಜನಿಕರಿಗೆ ಮುಕ್ತ ವೀಕ್ಷಣೆಗೆ ಅವಕಾಶವಿದೆ ಎಂದು ಸಂಘಟಕರು ತಿಳಿಸಿದರು.

ಬೆಳಿಗ್ಗೆ 8.30ಕ್ಕೆ ನೋಂದಣಿ ಪ್ರಾರಂಭವಾಗುತ್ತದೆ. 9:15ಕ್ಕೆ ಧ್ವಜಾರೋಹಣ, 9:30ಕ್ಕೆ ಸಾಮೂಹಿಕ ಮೆರವಣಿಗೆ ಮತ್ತು 10:30ಕ್ಕೆ ಮಳಿಗೆಗಳ ಉದ್ಘಾಟನೆ ನಡೆಯಲಿದೆ. 11:30ಕ್ಕೆ, ಪ್ರತಿನಿಧಿ ಸಭೆಯನ್ನು ಜಿಲ್ಲಾಧ್ಯಕ್ಷ ರಾಜು ಕಪ್ಪಣಕಲ್ ಅಧ್ಯಕ್ಷತೆಯಲ್ಲಿ ರಾಜ್ಯ ಅಧ್ಯಕ್ಷ ಪಿ.ವಿ. ರಾಜೇಶ್ ಉದ್ಘಾಟಿಸಲಿದ್ದಾರೆ. ರಾಜ್ಯ ಸಹ ಕಾರ್ಯದರ್ಶಿ ಬಿ. ಸುರೇಶ್ ಕುಮಾರ್, ಶಾಂತಕುಮಾರ್, ಶ್ರೀಜಿತ್ ಮತ್ತು ವಿದ್ಯಾಧರನ್ ಉಪಸ್ಥಿತರಿರುವರು. ಸಮಾಜದಲ್ಲಿ ಸಂಕಷ್ಟದಲ್ಲಿದ್ದ ಕುಟುಂಬಗಳನ್ನು ಗುರುತಿಸಿ ಉಚಿತ ವೈರಿಂಗ್ ನಡೆಸಿದ ಘಟಕಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜೇಶ್ ಕುಮಾರ್ ಎಂ.ಎಸ್. ಪ್ರಶಸ್ತಿ ವಿತರಿಸುವರು. ರಾಜ್ಯ ಖಜಾಂಚಿ ರತೀಶ್ ವಿ.ಪಿ. ಶೈಕ್ಷಣಿಕ ಪ್ರಶಸ್ತಿ ವಿತರಿಸಲಿದ್ದಾರೆ, ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಶಿಬು ಪಿ.ಪಿ. ಸಹಾಯಧನ ವಿತರಿಸುವರು. ರಾಜ್ಯ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ರೈತ ಪ್ರಶಸ್ತಿ ವಿತರಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಜು ಕಪ್ಪಣಕಲ್, ಬಿ.ಸುರೇಶ್ ಕುಮಾರ್, ರಾಜೀಶ್ ಎಂ.ಆರ್., ಅಬ್ದುಲ್ಲಾ ಎ.ಎಂ., ತಂಬಾನ್ ಪಿ., ಸತೀಶ್ ಕುಮಾರ್ ಆಳ್ವ ಮತ್ತು ಮಣಿ ಟಿ.ವಿ. ಉಪಸ್ಥಿತರಿದ್ದರು.

Post a Comment

0 Comments