ಮುಳ್ಳೇರಿಯ: ಆದೂರು ಠಾಣಾ ವ್ಯಾಪ್ತಿಯ ಎರಡು ಕಡೆಗಳಲ್ಲಿ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಪೊಲೀಸರು 4 ಮಂದಿಯನ್ನು ಬಂಧಿಸಿದ್ದಾರೆ. ಕುಂಟಾರು ಪ್ರಯಾಣಿಕರ ತಂಗುದಾಣದ ಬಳಿ ಜುಗಾರಿ ನಿರತರಾಗಿದ್ದ ಆದೂರು ಬಳಿಯ ನಿಶಾಂತ್(32), ಸಂಜೆಕಡವು ನಿವಾಸಿ ಚಿತ್ರಕುಮಾರ್(46) ಎಂಬಿವರನ್ನು ಬಂಧಿಸಲಾಗಿದೆ. ಇವರ ಕೈಯಿಂದ 2200 ರೂ.ವಶಪಡಿಸಲಾಗಿದೆ.
ಮುಳ್ಳೇರಿಯ ಸರಕಾರಿ ಮದ್ಯದಂಗಡಿಯ ಪರಿಸರದಲ್ಲಿನ ಜುಗಾರಿ ಕೇಂದ್ರಕ್ಕೆ ದಾಳಿ ನಡೆಸಿರುವ ಪೊಲೀಸರು ಮುಳ್ಳೇರಿಯ ನಿವಾಸಿ ಮೋಹನ(44), ಆದೂರು ಬಳಿಯ ಚನಿಯ(50) ಎಂಬಿವರನ್ನು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ 1500 ರೂ.ವಶಪಡಿಸಲಾಗಿದೆ.

0 Comments