ಪತ್ತನಂತಿಟ್ಟ: ಶಬರಿಮಲೆಯಲ್ಲಿ ಚಿನ್ನ ಕಳವು ನಡೆಸಿದ ಪ್ರಕರಣದಲ್ಲಿ ನಿವೃತ್ತ ತಿರುವಾಭರಣಂ ಕಮಿಷನರ್‌ನನ್ನು ಎಸ್.ಐ.ಟಿ.ಬಂಧಿಸಿದೆ. ತಿರುವಾಭರಣಂ ಕಮಿಷನರ್ ಆಗಿದ್ದ ಕೆ.ಎಸ್
ಬೈಜು ಬಂಧಿತ ಆರೋಪಿ. ಈತ ಶಬರಿಮಲೆ ಚಿನ್ನ ಕಳವು ಪ್ರಕರಣದ 7 ನೇ ಆರೋಪಿಯಾಗಿದ್ದಾನೆ.
ಶಬರಿಮಲೆಯಲ್ಲಿ ಚಿನ್ನ ಸಹಿತ ಬೆಲೆ ಬಾಳುವ ಸಾಮಗ್ರಿಗಳ ಜವಾಬ್ದಾರಿ ತಿರುವಾಭರಣಂ ಸಮಿತಿಯದ್ದಾಗಿದೆ. ಆದರೆ 2019 ಜುಲೈ 19 ರಂದು ದ್ವಾರಪಾಲಕ ಹಾಗೂ ಗರ್ಭಗುಡಿ ದಾರಂದದ ಚಿನ್ನ ತೆಗೆಯುವ ವೇಳೆ ತಿರುವಾಭರಣಂ ಕಮಿಷನರ್ ಆಗಿದ್ದ ಕೆ.ಎಸ್.ಬೈಜು ಹಾಜರಿರಲಿಲ್ಲ. ಇದು ಶಂಕೆಗೆ ಕಾರಣವಾಗಿದ್ದು ಈ ಹಿನ್ನೆಲೆಯಲ್ಲಿ ಬಂಧನ ನಡೆದಿದೆ.
ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಬಂಧಿತರ ಸಂಖೈ 4 ಕ್ಕೆ ಏರಿದೆ. ಉದ್ಯಮಿ ಉಣ್ಣಿಕೃಷ್ಣನ್ ಪೋಟ್ಟಿ, ದೇವಸ್ವಂ ಅಧಿಕಾರಿಗಳಾದ ಮುರಾರಿ ಬಾಬು, ಸುಧೀಶ್ ಕುಮಾರ್ ಎಂಬಿಬ್ಬರನ್ನು ಈ ಹಿಂದೆಯೇ ಬಂಧಿಸಲಾಗಿತ್ತು.

0 Comments