Ticker

6/recent/ticker-posts

Ad Code

ಕಾಸರಗೋಡಿನ ಪೋಲೀಸ್ ಠಾಣೆ ಸಂದರ್ಶಿಸಿ ಕಾರ್ಯ ವೈಖರಿ ಅರಿತ ಬಾಲ ಭವನ್ ನ ಬಾಲರು


ಕಾಸರಗೋಡು: ಬಾಲಭವನ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿಗಳು ಶಾಲಾ ಸಂಸ್ಥೆಯ ಸಲಹೆಗಾರ ಹಾಗೂ ಟ್ರೋಮಾಕೇರ್ ಪೋಲೀಸ್ ಒಲಿಯಂಟಿಯರ್ ನ ಉಪಾಧ್ಯಕ್ಷ ರಾದ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ ಅವರ ನೇತೃತ್ವದಲ್ಲಿ ಕಾಸರಗೋಡು ನಗರ ಠಾಣೆಯನ್ನು ಸಂದರ್ಶಿಸಿದರು. 

ಠಾಣಾಧಿಕಾರಿ ಇನ್ ಸ್ಪೆಕ್ಟರ್ ಓಫ್ ಪೋಲೀಸ್ ನಳಿನಾಕ್ಷನ್ ಅವರು ಲೋಕಪ್ ಹಾಗೂ ಪೋಲೀಸ್ ನಿಯಮ, ನಿಬಂಧನೆಗಳನ್ನು ವಿವರವಾಗಿ ಮಕ್ಕಳಿಗೆ ತರಗತಿ ನೀಡಿದರು. ಸಬ್ ಇನ್ ಸ್ಪೆಕ್ಟರ್ ಅನ್ಸಾರ್ ರವರು ಪೋಲೀಸ್ ಆಯುಧಗಳು, ಟಿಯರ್ ಗ್ಯಾಸ್, ಹ್ಯಾಂಡ್ ಕಪ್ ಇದರ ಉಪಯೋಗ ಹಾಗೂ ಮಹತ್ತರ ಮಾಗಿತಿಯನ್ನು ಮಕ್ಕಳಿಗೆ ತಿಳಿಸಿದರು. ಪಿ.ಕೆ. ರಾಮಕೃಷ್ಣನ್ ಸೋಷಿಯಲ್ ಪೋಲೀಸ್ ಡಿವಿಷನ್‌ ಜಿಲ್ಲಾ ಕೋರ್ಡಿನೇಟರ್ ಅವರು ಚೈಲ್ಡ್ ಲೈನ್ ಮಾದಕ ದ್ರವ್ಯ ಮಕ್ಕಳಿಗೆ ಪೋಲೀಸರಿಂದ ಬೇಕಾದ ಸಹಾಯ ಹೇಗೆ? ಇದರ ಕಾನೂನು ವ್ಯವಸ್ಥೆ ಹೇಗೆ? ಸರಳ ವಿಸ್ತಾರವಾಗಿ ನುಡಿದರು.ಈ ಸಂದರ್ಭದಲ್ಲಿ ಎಸ್ ಐ ಗಳಾದ ರಾಜೀವನ್, ಶಶಿಧರನ್ ವನಿತಾ ಎಸ್ ಐ ಸೌಪುನಿ , ಜನ ಮೈತ್ರಿ ಪೋಲೀಸ್ ಶ್ರೀಜಿತ್, ಶಾಲಾ ಮುಖ್ಯೋಪಾಧ್ಯಾಯಿನಿ ಲೀಲಾವತಿ ನಾಯರ್, ಶಾಲಾ ಪಿಟಿಎ ಕೋಶಾಧಿಕಾರಿ ಪ್ರಕಾಶ್ ಟೀಚರ್ ಗಳಾದ ರಾಧಾಮಣಿ, ಪವಿಳ, ಅನಿತ ಉಪಸ್ಥಿತರಿದ್ದರು. ಜನಮೈತ್ರಿ ಪೋಲೀಸ್ ವತಿಯಿಂದ ಮಕ್ಕಳಿಗೆ ತಂಪು ಪಾನೀಯ ಹಾಗೂ ಬಿಸ್ಕೆಟ್ ವಿತರಿಸಿದರು.

Post a Comment

0 Comments