Ticker

6/recent/ticker-posts

Ad Code

ಯುವತಿಯನ್ನು ಕಾಲಿನಿಂದ ಮೆಟ್ಟಿ ರೈಲಿನಿಂದ ಹೊರಕ್ಕೆ ತಳ್ಳಿದ ಕುಡುಕ ಪ್ರಯಾಣಿಕ; ಯುವತಿಯ ಸ್ಥಿತಿ ಗಂಭೀರ, ಆರೋಪಿಯ ಸೆರೆ


 ತಿರುವನಂತಪುರಂ: ಮದ್ಯ ಸೇವಿಸಿದ ಪ್ರಯಾಣಿಕ, 19 ವರ್ಷದ ಯುವತಿಯನ್ನು ಕಾಲಿನಿಂದ ಮೆಟ್ಟಿ ರೈಲಿನಿಂದ ಹೊರಕ್ಕೆ ತಳ್ಳಿದ ಘಟನೆ ನಡೆದಿದೆ.  ಪಾಲೋಡು ನಿವಾಸಿ ಸೋನ(19) ರೈಲು ಹಳಿಗೆ ಬಿದ್ದು ಗಂಭೀರ ಗಾಯಗೊಂಡು ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಗಿದೆ. ಆಕೆಯ ಸೊಂಟ, ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಈ ಪ್ರಕರಣದ ಆರೋಪಿ ವಡಕ್ಕೇಕರ ಸುರೇಶ್ ಕುಮಾರ್(48) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ (ಆದಿತ್ಯವಾರ) 8.30 ಕ್ಕೆ ತಿರುವನಂತಪುರಂ ಸಾಗುವ ಕೇರಳ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಘಟನೆ ನಡೆದಿದೆ. ಆಲುವ- ತಿರುವನಂತಪುರಂ ಮಧ್ಯೆ ಸೋನ ಶೌಚಾಲಯಕ್ಕೆ ಹೋಗಿ ಬಂದಾಗ ಆರೋಪಿ ಮದ್ಯದಮಲಿನಲ್ಲಿ ಆಕೆಯನ್ನು ಹಿಂದಿನಿಂದ ಮೆಟ್ಟಿ ಕೆಳಕ್ಕೆ ಬೀಳಿಸಿದನೆನ್ನಲಾಗಿದೆ. ಈ ವೇಳೆ ತಿರುವನಂತಪುರಂನಿಂದ ಆಲುವಾ ಭಾಗಕ್ಕೆ  ಬರುತ್ತಿದ್ದ ಮೆಮು ರೈಲಿನಲ್ಲಿ ಈಕೆಯನ್ನು ಹತ್ತಿಸಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ

Post a Comment

0 Comments