Ticker

6/recent/ticker-posts

Ad Code

ಕರ್ತವ್ಯದ ವೇಳೆ ಅಫಘಾತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯ ಕುಟುಂಬಕ್ಕೆ ಇಲಾಖೆಯ ನೆರವು


 ಕಾಸರಗೋಡು: ಮಾದಕವಸ್ತು ಸಾಗಾಟದ ಆರೋಪಿಯನ್ನು ಬಂಧಿಸಲು ಹೋಗುವ ಮಧ್ಯೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿ ಕೆ.ಕೆ.ಸಜೀಶ್ ರವರ ಕುಟುಂಬಕ್ಕೆ ಇಲಾಖೆಯ ನೆರವು, ಮೃತಪಟ್ಟ ಅಧಿಕಾರಿ ಪಡೆದ 28 ಲಕ್ಷ ರೂ.ಗೃಹ  ಸಾಲವನ್ನು ಪೊಲೀಸ್ ಹೌಸಿಂಗ್ ಸಹಕಾರೀ ಸಂಘದ ಆಡಳಿತ ಸಮಿತಿ ಪಾವತಿಸಿದೆ. ಸಾಲ ಪಡೆಯಲು ನೀಡಿದ್ದ ಸ್ಥಳದ ದಾಖಲೆಗಳನ್ನು ನಿನ್ನೆ (ಆದಿತ್ಯವಾರ) ನಡೆದ ಕಾರ್ಯಕ್ರಮದಲ್ಲಿ ಹಿಂತಿರುಗಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಅಧಿಕಾರಿ ರವತ ಚಂದ್ರಶೇಖರನ್, ಡಿಜಿಜಿ ರಾಜಪಾಲ ಮೀನ, ಡಿಐಜಿ ಯತೀಶ್ ಚಂದ್ರ, ಜಿಲ್ಲಾ ಪೊಲೀಸ್ ಅಧಿಕಾರಿ ವಿಜಯ ಭರತ್ ರೆಡ್ಡಿ, ಹೌಸಿಂಗ್ ಸಹಕಾರಿ ಸಂಘದ ಅಧ್ಯಕ್ಷ ಕೆ.ಪಿ.ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು. ಪೊಲೀಸ್ ಕ್ವಾಟರ್ಸಿನಲ್ಲಿ ಪತ್ನಿ ಮಕ್ಕಳ ಜತೆ ವಾಸಿಸುತ್ತಿದ್ದ ಕೆ.ಕೆ.ಸಜೀಶ್ ಹೊಸ ಮನೆಯ ಕಾಮಗಾರಿ ಪೂರ್ಣಗೊಂಡಿದ್ದು ಗೃಹಪ್ರವೇಶದ ಸಿದ್ದತೆಯ ಮಧ್ಯೆ ಅಪಘಾತದಲ್ಲಿ ಮೃತಪಟ್ಟಿದ್ದರು.

Post a Comment

0 Comments