ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯ ಅಂಗವಾಗಿ ನಾಮಪತ್ರ ಸಲ್ಲಿಕೆ ನಾಳೆ (ಶುಕ್ರವಾರ)ಯಿಂದ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ 3 ಗಂಟೆಯ ವರೆಗೆ ನಾಮಪತ್ರ ಸಲ್ಲಿಕೆ ಇರುವುದು. ಈ ತಿಂಗಳ 21 ರವರೆಗೆ ನಾಮಪತ್ರ ಸಲ್ಲಿಕೆ ಸಲ್ಲಿಸಬಹುದಾಗಿದೆ.. 22 ರಂದು ಸೂಕ್ಷ್ಮ ಪರಿಶೋಧನೆ, 24 ರ ವರೆಗೆ ನಾಮಪತ್ರ ಹಿಂದಕ್ಕೆ ಪಡೆಯುವುದು ಎಂಬೀ ರೀತಿಯಾಗಿದೆ. ಗ್ರಾಮ ಪಂಚಾಯತಿಗೆ ನಾಮಪತ್ರ ಸಲ್ಲಿಸುವಾಗ 2 ಸಾವಿರ ರೂ, ಬ್ಲೋಕ್, ಮುನ್ಸಿಪಾಲಿಟಿ 4 ಸಾವಿರ, ಜಿಲ್ಲಾ ಪಂಚಾಯತು 5 ಸಾವಿರ ಎಂಬೀ ರೀತಿ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ ವರ್ಗದವರಿಗೆ ನಿಶ್ಚಿತ ಶುಲ್ಕದ ಅರ್ಧ ಪಾವತಿಸಿದರೆ ಸಾಕು. 21 ವಯಸ್ಸು ಪೂರ್ಣಗೊಂಡವರು ನಾಮಪತ್ರ ಸಲ್ಲಿಸಬಹುದು.

0 Comments