Ticker

6/recent/ticker-posts

Ad Code

ಪ್ರೀತಿಸುವ ಸೋಗಿನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ, ಗೂಡಂಗಡಿ ವ್ಯಾಪಾರಿಯ ಬಂಧನ

 

ಕುಂಬಳೆ: 14 ವರ್ಷದ ಬಾಲಕಿಗೆ ಪ್ರೀತಿಸುವ ಸೋಗಿನಲ್ಲಿ ಲೈಂಗಿಕ ಕಿರುಕುಳ ನೀಡಿದ  ಪ್ರಕರಣದಲ್ಲಿ ಗೂಡಂಗಡಿ ವ್ಯಾಪಾರಿಯನ್ನು ಬಂಧಿಸಲಾಗಿದೆ. ಈ ಹಿಂದೆ ಮೊಗ್ರಾಲಿನಲ್ಲಿ ಗೂಡಂಗಡಿ ವ್ಯಾಪಾರಿಯಾಗಿದ್ದು ಇದೀಗ ಮೇಲ್ಪರಂಬದಲ್ಲಿ ವ್ಯಾಪಾರಿಯಾಗಿರುವ  ಮುಹಮ್ಮದ್ ಮುನೀರ್(24) ಬಂಧಿತ ಆರೋಪಿ. ಕುಂಬಳೆ ಇನ್ಸ್ಪೆಕ್ಟರ್ ಟಿ.ಕೆ.ಮುಕುಂದರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಆರೋಪಿಯ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಈತ ಮೊಗ್ರಾಲಿನಲ್ಲಿ  ಗೂಡಂಗಡಿ ವ್ಯಾಪಾರಿಯಾಗಿದ್ದ ವೇಳೆ ಬಾಲಕಿಗೆ ಕಿರುಕುಳ ನೀಡಿದ್ದನು. ಈತನ ವಿರುದ್ದ ಪೋಕ್ಸೊ ಕಾಯ್ದೆಯಂತೆ ಕೇಸು ದಾಖಲಿಸಲಾಗಿದೆ.

Post a Comment

0 Comments