Ticker

6/recent/ticker-posts

Ad Code

ಕಿದೂರು ಸ್ಮಶಾನದಲ್ಲಿದ್ದ ಮರಗಳನ್ನು ಕಡಿದು ಸಾಗಿಸಿದ ಪ್ರಕರಣ; ಕುಂಬಳೆ ಗ್ರಾಮ ಪಂಚಾಯತು ಸದಸ್ಯನ ಸೆರೆ


 ಕುಂಬಳೆ:  ಕುಂಬಳೆ ಗ್ರಾಮ‌ ಪಂಚಾಯತು ಆಧೀನದಲ್ಲಿರುವ ಕಿದೂರು ಸ್ಮಶಾನದಲ್ಲಿದ್ದ  ಮರಗಳನ್ನು ಕಡಿದು ಸಾಗಿಸಿದ ಪ್ರಕರಣದಲ್ಲಿ  ಕಾಂಗ್ರೆಸ್ ಪಂಚಾಯತು ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಗ್ರಾಮ ಪಂಚಾಯತು 8 ನೇ ವಾರ್ಡ್ ಸದಸ್ಯ  ರವಿರಾಜ್ ಯಾನೆ ತುಮ್ಮ ಬಂಧಿತ ಆರೋಪಿ. ಕಿದೂರು ಕುಂಟಂಗೇರಡ್ಕದಲ್ಲಿರುವ ಸ್ಮಶಾನದಿಂದ ಎರಡು ವಾರಗಳ ಹಿಂದೆ 124 ಮರಗಳನ್ನು ‌ಕಡಿದು ಸಾಗಿಸಲಾಗಿತ್ತು. ಈ ವಿಷಯವು ವಿವಾದವಾದ ಹಿನ್ನೆಲೆಯಲ್ಲಿ ಗ್ರಾಮ‌ಪಂಚಾಯತು ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಮರಸಾಗಾಟ ರವಿರಾಜ್ ನೇತೃತ್ವದಲ್ಲಿ ನಡೆದಿದೆ ಎಂದು ತಿಳಿದುಬಂತು. ಅದರಂತೆ ಬಂಧನ ನಡೆದಿದೆ. ಸಾಗಿಸಿದ ಮರಗಳನ್ನು ಮಿಲ್ ಒಂದರಲ್ಲಿ ಮಾರಾಟ ಮಾಡಿದ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ

Post a Comment

0 Comments