Ticker

6/recent/ticker-posts

Ad Code

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಸಿಮೆಂಟ್ ಗರ್ಡರ್ ಪಿಕಪ್ ವ್ಯಾನಿನ ಮೇಲೆ ಬಿದ್ದು ಚಾಲಕ ಮೃತ್ಯು


 ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಸಿಮೆಂಟ್ ಗರ್ಡರ್ ಪಿಕಪ್ ವ್ಯಾನಿನ ಮೇಲೆ ಬಿದ್ದು ಚಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಆಲಪುಳ ನಿವಾಸಿ  ರಾಜೇಶ್ ಮೃತಪಟ್ಟ ಚಾಲಕ. ಇಂದು (ಗುರುವಾರ) ಮುಂಜಾನೆ 2 ಗಂಟೆಯ ವೇಳೆ ಈ ದುರ್ಘಟನೆ ನಡೆದಿದೆ.

     ಆಲಪುಳ ಜಿಲ್ಲೆಯ ಅರೂರು- ತುರವೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಸೇತುವೆ ನಿರ್ಮಾಣದ ಅಂಗವಾಗಿ ಸ್ಥಾಪಿಸುವ 80 ಟನ್ ಭಾರದ ಗರ್ಡರ್ ಕ್ರೇನ್ ಮೂಲಕ ಮೇಲೆತ್ತುವ ವೇಳೆ ದುರ್ಘಟನೆ ನಡೆದಿದೆ. ಗರ್ಡರ್ ಮೇಲೆ ಸ್ಥಾಪಿಸಿ ಕ್ರೇನ್ ಹಿಡಿತ ಸಡಿಲಗೊಳಿಸುತ್ತಿದ್ದಂತೆಯೇ ಅದು ಜಾರಿ ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಪಿಕಪ್ ವ್ಯಾನಿನ ಮೇಲೆ ಗರ್ಡರ್ ಬಿದ್ದಿದ್ದು ಚಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಭಾರವಾದ ಗರ್ಡರ್ ಸ್ಥಾಪಿಸುವ ವೇಳೆ ವಾಹನ ಸಂಚಾರ ನಿಲುಗಡೆ ಇರಲಿಲ್ಲ ಎಂದು ತಿಳಿದುಬಂದಿದೆ

Post a Comment

0 Comments