ಕುಂಬಳೆ: ಪೂರ್ವ ಅನುಮತಿ ಪಡೆಯದೆಯೇ ಖಾಸಗಿ ವ್ಯಕ್ತಿಯ ಹಿತ್ತಲಿನಿಂದ ಮಣ್ಣು ಸಾಗಾಟ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. ಪೊಲೀಸರನ್ನು ಕಂಡಾಗ ಮಣ ಸಾಗಿಸುವ ಟಿಪ್ಪರುಗಳು ಪರಾರಿಯಾಗಿದ್ದು ಜೆಸಿಬಿಯನ್ನು ವಶಪಡಿಸಲಾಗಿದೆ. ಕುಂಬಳೆ ಪೇರಾಲ್ ಪೊಟ್ಡೋರಿ ಎಂಬಲ್ಲಿ ಈ ಘಟನೆ ನಡೆದಿದೆ.
ಅನಧಿಕೃತವಾಗಿ ಮಣ್ಣು ಸಾಗಿಸಲಾಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದಾಗ ಟಿಪ್ಪರುಗಳ ಸಹಿತ ಚಷಲಕರುಗಳು ನಾಪತ್ತೆಯಾಗಿದ್ದರು. ಆದರೆ ಜೆಸಿಬಿಯನ್ನು ವಶಪಡಿಸಲಾಯಿತು. ಜೆಸಿಬಿಯ ದಾಖಲೆಗಳು ಲಭಿಸಿಲ್ಲವೆಂದೂ ಯಾವುದೋ ಸ್ಕೂಟರಿನ ನಂಬ್ರವನ್ನು ಬಳಸಿ ಮಣ್ಣು ಕೆಲಸ ಮಾಡಲಾಗುತ್ತಿದೆಯೆಂದೂ ಪೊಲೀಸರು ತಿಳಿಸಿದ್ದಾರೆ

0 Comments