Ticker

6/recent/ticker-posts

Ad Code

ಮಿನಿಯೇಚರ್ ಬಲ್ಬಿನಿಂದ ಶಾಕ್ ತಗುಲಿ 5 ವರ್ಷದ ಬಾಲಕ ಮೃತ್ಯು


 ಮಿನಿಯೇಚರ್ ಬಲ್ಬಿನಿಂದ ಶಾಕ್ ತಗುಲಿ 5 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕಣ್ಣೂರು ಮಟ್ಟನ್ನೂರು  ಕೋಳಾರಿ ನಿವಾಸಿ ಸಿ.ಮುಈನುದ್ದೀನ್ ಮೃತಪಟ್ಟ ಬಾಲಕ. ನಿನ್ನೆ (ಗುರುವಾರ) ಸಾಯಂಕಾಲ 7 ಗಂಟೆಯ ವೇಳೆ ಈ ದುರ್ಘಟನೆ ನಡೆದಿದೆ. ಮನೆಯ ಗ್ರಿಲ್ ನಲ್ಲಿ ಮಿನಿಯೇಚರ್ ಬಲ್ಬ್ ಸ್ಥಾಪಿಸಲಾಗಿತ್ತು. ಬಾಲಕ ಗ್ರಿಲ್ ಮೇಲೆ ಹತ್ತುವ ವೇಳೆ ಶಾಕ್ ತಗುಲಿತೆನ್ನಲಾಗಿದೆ. ಕೆಳಕ್ಕೆ ಬಿದ್ದ ಬಾಲಕನನ್ನು ಕೂಡಲೇ ಮಟ್ಟನ್ನೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಗಂಭೀರ ಸ್ಥಿತಿಯ ಹಿನ್ನೆಲೆಯಲ್ಲಿ ಕೂತುಪರಂಬ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಕೊನೆಯುಸಿರೆಳೆದನೆಂದು ತಿಳಿದು ಬಂದಿದೆ

Post a Comment

0 Comments