Ticker

6/recent/ticker-posts

Ad Code

ಅತಿ ತೀವ್ರ ಹಿಂಗಾರು ಮಳೆ; ರಾಜ್ಯದ 11 ಜಿಲ್ಲೆಗಳಲ್ಲಿ ಎಚ್ಚರ ವಹಿಸಲು ಕೇಂದ್ರ ಹವಾಮಾನ ಇಲಾಖೆ ಕರೆ.


 ತಿರುವನಂತಪುರಂ: ಹಿಂಗಾರು ಮಳೆ ತೀವ್ರಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ‌ಮುನ್ನೆಚ್ಚರಿಕೆ ವಹಿಸಲು ಕೇಂದ್ರ ಹವಾಮಾನ ಇಲಾಖೆ ಆದೇಶ ನೀಡಲಾಗಿದೆ. ಕಾಸರಗೋಡು, ಕಣ್ಣೂರು, ಮಲಪ್ಪುರಂ, ಕೋಜಿಕ್ಕೋಡು ಜಿಲ್ಲೆಗಳಲ್ಲಿ ಸಿಡಿಲು ಸಹಿತ ಅತಿ ಶಕ್ತವಾದ ಮಳೆ ಬರಲಿದ್ದು  ಆರೆಂಜ್ ಅಲರ್ಟ್ ವಹಿಸಲಾಗಿದೆ. ಪತ್ತನಂತಿಟ್ಟ, ಕೊಟ್ಟಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರು, ಪಾಲಕ್ಕಾಡ್ ಸಹಿತ ವಿವಿದ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಿಡಿಲು ತೀವ್ರಗೊಳ್ಳಲಿದ್ದು ಸಾರ್ವಜನಿಕರು ಎಚ್ಚರ ವಹಿಸಲು ಆದೇಶ ನೀಡಲಾಯಿತು. ಈ ತಿಂಗಳ 22 ರ ವರೆಗೆ ಸಿಡಿಲು ಸಹಿತ ಮಳೆ ಮುಂದುವರಿಯಲಿದೆ

Post a Comment

0 Comments