Ticker

6/recent/ticker-posts

Ad Code

ಅತಿ ತೀವ್ರ ಮಳೆ; ಸಿಡಿಲು ಬಡಿದು ಮಹಿಳೆ ಮೃತ್ಯು; ವಯನಾಡಿನಲ್ಲಿ 4 ಮಂದಿ ಉದ್ಯೋಗ ಖಾತರಿ ಕಾರ್ಮಿಕರಿಗೆ ಗಾಯ


 ತಿರುವನಂತಪುರಂ: ರಾಜ್ಯದಿಂದ ಹಿಂಗಾರು ಮಳೆಯ ಜತೆ ಉಂಟಾಗುತ್ತಿರುವ ಸಿಡಿಲು ಬಡಿತದಿಂದ ಕೋಜಿಕ್ಕೋಡಿನಲ್ಲಿ ಮಹಿಳೆ ಮೃತಪಟ್ಟಿದ್ದಾರೆ.  ವಯನಾಡಿನಲ್ಲಿ 4 ಮಂದಿ ಉದ್ಯೋಗ ಖಾತರಿ ಕಾರ್ಮಿಕರಿಗೆ ಸಿಡಿಲು ಬಡಿತದಿಂದ ಗಂಭೀರ ಗಾಯಗಳಾಗಿದೆ.

      ಕೋಜಿಕ್ಕೋಡು ನರಿಕುನಿ ಪುಲ್ಲಾಳೂರ್ ರಿಯಾಸ್ ಎಂಬವರ ಪತ್ನಿ ಸುನೀರ(40) ಸಿಡಿಲು ಬಡಿದು ಮೃತಪಟ್ಟಿದ್ದಾರೆ.‌ನಿನ್ನೆ (ಶನಿವಾರ)  ಸಾಯಂಕಾಲ ಮನೆಯ ಸಿಟೌಟಿನಲ್ಲಿ ಕುಳಿತಿದ್ದಾಗ ಶಕ್ತಿಯುತವಾದ ಸಿಡಿಲು ಬಡಿದಿದೆ.ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಮೃತರು ಪತಿ, ಮಕ್ಕಳು, ಸಹೋದರ ಸಹೋದತೊಯರನ್ನು ಅಗಲಿದ್ದಾರೆ. ವಯನಾಡಿನಲ್ಲಿ ಸಿಡಿಲು ಬಡಿತದಿಂದ 4 ಮಂದಿ ಉದ್ಯೋಗ ಖಾತರಿ ಕಾರ್ಮಿಕರು ಗಾಯಗೊಂಡಿದ್ದಾರೆ. ಗಿರಿಜ(31), ರಾಧ(36), ಲತ(20), ನಿಶ(44) ಗಾಯಗೊಂಡವರು. ಇವರನ್ನು ಆಸ್ಪತ್ರೆಗೆ ಸೇರಿಸಲಾಯಿತು

Post a Comment

0 Comments