Ticker

6/recent/ticker-posts

Ad Code

ನಾಳೆ (ಅ.24) ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನ ಭೂಮಿಪೂಜೆ ಹಾಗೂ ಶಿಲಾಮಯ ಗರ್ಭಗುಡಿ ಶಿಲಾನ್ಯಾಸಕ್ಕೆ ಸಿದ್ಧತೆ ಪೂರ್ಣ


ಮುಂಡಿತ್ತಡ್ಕ : ಅತೀ ಪುರಾತನವಾದ ಹಾಗೂ ಪ್ರಕೃತಿ ರಮಣೀಯ ಕಾರಣಿಕ ಕ್ಷೇತ್ರವಾದ ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಪ್ರಗತಿಯಲ್ಲಿದ್ದು  ಅ. 24ಕ್ಕೆ ಶುಕ್ರವಾರ ಬೆಳಿಗ್ಗೆ 10.30ರ  ಶುಭಮುಹೂರ್ತದಲ್ಲಿ ಭೂಮಿಪೂಜೆ ಹಾಗೂ ಬೆಳಿಗ್ಗೆ 11.20ರ ಶುಭ ಲಗ್ನ ಸುಮುಹೂರ್ತದಲ್ಲಿ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಸುಬ್ರಾಯ ದೇವರ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಜರಗಲಿದೆ.  



ಇದರ ಪೂರ್ವಭಾವಿಯಾಗಿ ದಿನಂಪ್ರತಿ ವಿವಿದೆಡೆಯ ಭಕ್ತರು, ಸಂಘ ಸಂಸ್ಥೆಗಳು ಹಗಲು ರಾತ್ರಿ ಶ್ರಮದಾನ ನಿರತರಾಗಿದ್ದಾರೆ. 

ನಾಳಿನ ಕಾರ್ಯಕ್ರಮದಂಗವಾಗಿ ಬೆಳಿಗ್ಗೆ 8-30 ಗಂಟೆಗೆ : ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, 9 ಗಂಟೆಗೆ ಜರಗುವ ಧಾರ್ಮಿಕ ಸಭೆಯಲ್ಲಿ ಎಡನೀರು ಮಠ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು,  ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ, ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ಕ್ಷೇತ್ರ ಕೊಂಡೆವೂರು ಆಶೀರ್ವಚನಗೈಯಲಿದ್ದಾರೆ. ಬಾಡೂರು ಯಜಮಾನ್ ಶ್ರೀ ಕುಂಞಣ್ಣ ಭಂಡಾರಿ ಕೋಳಾರು ಅಧ್ಯಕ್ಷತೆವಹಿಸುವರು.

ಕ್ಷೇತ್ರದ ತಂತ್ರಿವರ್ಯರಾದ ದೇಲಂಪಾಡಿ ಬ್ರಹ್ಮಶ್ರೀ ಗಣೇಶ ತಂತ್ರಿ ದಿವ್ಯ ಉಪಸ್ಥಿತರಿರುವರು.ಧಾರ್ಮಿಕ ಮುಂದಾಳು,ಅನಿವಾಸಿ  ಉದ್ಯಮಿ ಇ. ಎಸ್. ಮಹಾಬಲೇಶ್ವರ ಭಟ್ ಎಡಕ್ಕಾನ,ಶಿವಶಂಕರ ನೆಕ್ರಾಜೆ,ವಸಂತ ಪೈ ಬದಿಯಡ್ಕ,ಉದ್ಯಮಿ ಗಿರಿಧರ ಶೆಟ್ಟಿ ಮಂಗಳೂರು,ಕನಿಲ ಶ್ರೀ ಭಗವತಿ ಕ್ಷೇತ್ರ ಅಧ್ಯಕ್ಷ ಪದ್ಮನಾಭ ಕಡಪ್ಪರ, ಉದಯಶಂಕರ ಭಟ್ ಕರೋಡಿ ಮುಖ್ಯ ಅತಿಥಿಗಳಾಗಿರುವರು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೆಂಕಟ್ರಮಣ ಭಟ್,ಅಮೆತ್ತೋಡು ಕ್ಷೇತ್ರ ಪವಿತ್ರಪಾಣಿ ಸುರೇಶ್ಚಂದ್ರ ರಾವ್,ಹೊಸಂಗಡಿ ಆದಿಕ್ಷೇತ್ರ ಶ್ರೀ ರಕ್ಷೇಶ್ವರಿ ದೇವಸ್ಥಾನ ಪ್ರಧಾನ ಕಾರ್ಯದರ್ಶಿಪದ್ಮನಾಭ ಆಚಾರ್ಯ ಬಾಡೂರು,ಆಡಳಿತ ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯಕ್ ಶೇಣಿ,ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರಾಮ್‌ ಕುಮಾರ್ ಯಂ.ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರಸಾದ್ ರೈ ಮೊದಲಾದವರು ಉಪಸ್ಥಿತರಿರುವರು.

Post a Comment

0 Comments