ಕುಂಬಳೆ: ಮಂಜೇಶ್ವರ ಬ್ಲಾಕ್ ಪಂಚಾಯತಿಯ ವರ್ಕಾಡಿ ಧರ್ಮನಗರದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಹಿಳಾ ಹಾಸ್ಟೆಲ್ ಅನ್ನು ಅ. 28 ರಂದು ಉದ್ಘಾಟಿಸಲಾಗುವುದೆಂದು ಸಂಬಂಧಪಟ್ಟವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಧ್ಯಾಹ್ನ 2ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಎ.ಕೆ.ಎಂ. ಅಶ್ರಫ್ ಹಾಸ್ಟೆಲ್ ಉದ್ಘಾಟಿಸುವರು. ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಉಪಾಧ್ಯಕ್ಷ ಪಿ.ಕೆ. ಮುಹಮ್ಮದ್ ಹನೀಫ್ ಉಪಸ್ಥಿತರಿರುವರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಎಲ್.ಎಸ್.ಜಿ.ಡಿ. ಸಹಾಯಕ ಎಂಜಿನಿಯರ್ ನೀಲಾಂಜನ ಎಂ.ಕೆ. ವರದಿ ಮಂಡಿಸುವರು. ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಎಸ್. ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಬ್ಲಾಕ್ ಪಂಚಾಯತಿ ಮಾಜಿ ಅಧ್ಯಕ್ಷ ಮುಮ್ತಾಜ್ ಸಮೀರಾ ಮತ್ತು ಆಯಿಷತ್ ತಾಹಿರಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಹಾಸ್ಟೆಲ್ ನಿಯಮಾವಳಿಯನ್ನು ಶಾಸಕ ಎ.ಕೆ.ಎಂ. ಅಶ್ರಫ್ ಬಿಡುಗಡೆಗೊಳಿಸುವರು.
ಈ ಹಾಸ್ಟೆಲ್ ಜಿಲ್ಲೆಯ ಮಹಿಳಾ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಕಾನೂನು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆಯೆಂದು ನಿರ್ವಹಣಾ ಸಮಿತಿ ಸ್ಪಷ್ಟಪಡಿಸಿದೆ. ಬ್ಲಾ.ಪಂ. ಇದರ ನಿರ್ವಹಣೆಯನ್ನು ಸಂಪೂರ್ಣ ನಿರ್ವಹಿಸಲಿದೆ.
ಸಮಾರಂಭದಲ್ಲಿ ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್, ಸರೋಜಾ ಆರ್.ಬಲ್ಲಾಳ್, ಶಮ್ಸಿನಾ ಅಬ್ದುಲ್ಲ, ವರ್ಕಾಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಬೂಬಕರ್ ಸಿದ್ದಿಕ್, ಸದಸ್ಯರಾದ ಸಫಾ ಫಾರೂಕ್, ಮೊಯ್ದೀನ್ ಕುಂಞÂ್ಞ ತೆಲಕ್ಕಿ, ಚಂದ್ರಾವತಿ ಶೆಟ್ಟಿ, ಕೆ., ಬಟ್ಟು ಶೆಟ್ಟಿ, ಫಾತಿಮತ್ ಸುಹ್ರಾ, ಅಶೋಕ.ಕೆ, ರಾಧಾಕೃಷ್ಣ.ಕೆ.ವಿ, ಅಶ್ವಿನಿ ಎಂ.ಎಲ್, ವಾರ್ಡ್ ಸದಸ್ಯೆ ಇಬ್ರಾಹಿಂ ಧರ್ಮನಗರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾಕುಮಾರಿ, ಯೋಜನಾ ಸಮಿತಿ ಉಪಾಧ್ಯಕ್ಷೆ ಇಬ್ರಾಹಿಂ ಮುಂಡ್ಯತ್ತಡ್ಕ, ಬ್ಲಾಕ್ ಪಂಚಾಯತಿ ಕಾರ್ಯದರ್ಶಿ ಹರೀಶ್ ಕೆ. ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಉಪಾಧ್ಯಕ್ಷ ಪಿ.ಕೆ. ಮುಹಮ್ಮದ್ ಹನೀಫ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶಮ್ಸಿನಾ ಅಬ್ದುಲ್ಲಾ, ಮತ್ತು ಬ್ಲಾಕ್ ಪಂಚಾಯತಿ ಸದಸ್ಯ ಮೊಯ್ದೀನ್ ಕುಂಞÂ್ಞ ಭಾಗವಹಿಸಿ ಮಾಹಿತಿ ನೀಡಿದರು.



0 Comments