Ticker

6/recent/ticker-posts

Ad Code

ರಾಜ್ಯದಲ್ಲಿ ಇಂದು ಸಹ ಅತಿ ಶಕ್ತವಾದ ಮಳೆ; ಕಾಸರಗೋಡು ಸಹಿತ 6 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್


 ತಿರುವನಂತಪುರಂ: ರಾಜ್ಯದಲ್ಲಿ ಇಂದು ಸಹ ಅತಿ ಶಕ್ತವಾದ ಮಳೆ ಬರಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕೇರಳದ 6 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು, ಕಣ್ಣೂರು, ವಯನಾಡ್, ಕೋಜಿಕ್ಕೋಡು, ಮಲಪ್ಪುರಂ, ತ್ರಿಶೂರ್ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಆಗಿರುತ್ತದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆ, ಗಾಳಿ, ಸಿಡಿಲು ಕಾಣಿಸಿಕೊಳ್ಳಲಿದೆ. ನಾಳೆ (ಸೋಮವಾರ) ಕೋಜಿಕ್ಕೋಡು, ಕಣ್ಣೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಆಗಿರುತ್ತದೆ. ಕೇರಳ, ಕರ್ಣಾಟಕ, ಲಕ್ಷದ್ವೀಪ ಕಡಲಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ.

Post a Comment

0 Comments