Ticker

6/recent/ticker-posts

Ad Code

ಬಿಗ್ ಬಾಸ್ 7ರ ಸ್ಪರ್ಧಾರ್ಥಿ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನ

 


ಮಂಗಳೂರು : ರಂಗಭೂಮಿ ಕಲಾವಿದ ಮತ್ತು ಸ್ಯಾಂಡಲ್​ವುಡ್ ಹಾಸ್ಯ ನಟ ರಾಜು ತಾಳಿಕೋಟೆ (59) ಹೃದಯಾಘಾತದಿಂದ ಉಡುಪಿಯಲ್ಲಿ ಚಲನಚಿತ್ರ ಚಿತ್ರೀಕರಣದ ನಡುವೆ ನಿಧನರಾಗಿದ್ದಾರೆ. ಉತ್ತರ ಕರ್ನಾಟಕದ ರಂಗಭೂಮಿ ಕಲಾವಿದನಾಗಿ ಬೆಳಕಿಗೆ ಬಂದ ರಾಜು ತಾಳಿಕೋಟೆ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿ, ಕುಡುಕನ ಪಾತ್ರಗಳ ಮೂಲಕ ಮನೆಮಾತಾಗಿದ್ದರು. ಹಲವು ಕನ್ನಡ ಸಿನಿಮಾಗಳಲ್ಲಿ ಉತ್ತರ ಕರ್ನಾಟಕ ಭಾಷೆಯಲ್ಲಿಯೇ ಡೈಲಾಗ್​ಗಳನ್ನ ಹೊಡೆಯುತ್ತಾ, ಕನ್ನಡಿಗರನ್ನ ನಗೆಗಡಲಲ್ಲಿ ತೇಲಿಸುತ್ತಿದ್ದ ಹಿರಿಯ ನಟ ಇಂದು ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಬಣ್ಣದ ಲೋಕದಿಂದ ದೂರಾಗಿದ್ದಾರೆ.ಉಡುಪಿಯಲ್ಲಿ ಬಿಗ್​ ಬಾಶ್ ವಿನ್ನರ್​, ಶೈನ್​ ಶೆಟ್ಟಿ ನಟಿಸುತ್ತಿದ್ದ ಸಿನಿಮಾ ಶೂಟಿಂಗ್​​ನಲ್ಲಿ ನಟಿಸುತ್ತಿದ್ದರು.   ತಕ್ಷಣ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ.ರಂಗಭೂಮಿಯಲ್ಲಿ ಅಪಾರ ಅನುಭವ ಹೊಂದಿದ್ದ ತಾಳಿ ಕೋಟೆ ಕನ್ನಡ ಚಲನಚಿತ್ರ ರಂಗದಲ್ಲೂ ತಮ್ಮ ನಟನೆಯ ಮೂಲಕ ಕನ್ನಡಾಭಿಮಾನಿಗಳ ಗಮನ ಸೆಳೆದಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ 'ಮನಸಾರೆ' ಚಿತ್ರದ ಮೂಲಕ ತಾಳಿಕೋಟೆ ಪ್ರಸಿದ್ದಿ ಪಡೆದಿದ್ದರು. ಆ ನಂತರ ಪಂಚರಂಗಿ, ಟೋಪಿವಾಲಾ, ಮತ್ತೊಂದು ಮದುವೆನಾ, ಅದ್ದೂರಿ, ಬಹದ್ದೂರ್​, ರಾಜಧಾನಿ,ಸವಾರಿ, ಅಂಜದ ಗಂಡು, ರಾಜ ಹಂಸ,ಮಲ್ಲಿಕಾರ್ಜುನ, ಕಳ್ಳ ಮಳ್ಳ ಸುಳ್ಳ, ಮೈಲಾರಿ, ಪರಮಾತ್ಮ, ಭರ್ಜರಿ,ಭರಾಟೆ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Post a Comment

0 Comments