ಪತ್ತನಂತಿಟ್ಟ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆಯಾದ ಬಗ್ಗೆ ವಿಶೇಷ ತನಿಖಾ ತಂಡ ತನಿಖೆ ಮುಂದುವರಿಐತ್ತಿದ್ದಂತೆಯೇ ಅಲ್ಲಿನ ಮಹತ್ವದ ದಾಖಲೆಗಳು ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಉದ್ಯಮಿ ವಿಜಯ್ ಮಲ್ಯ ಶಬರಿಮಲೆಯಲ್ಲಿ ಚಿನ್ನ ಲೇಪಿಸಿದ ದಾಖಲೆಗಳು ನಾಪತ್ತೆಯಾಗಿವೆ. ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್.ಐ.ಟಿ.ತಂಡವು, ವಿಜಯ್ ಮಲ್ಯ ಚಿನ್ನ ಲೇಪಿಸಿದ ದಾಖಲೆ ಕೇಳಿತ್ತು. ಹಲವು ಸಲ ಕೇಳಿಯೂ ಸಹ ದಾಖಲೆ ಲಭಿಸಲಿಲ್ಲ. ಇದೀಗ ಆ ದಾಖಲೆಗಳೇ ನಾಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
1998-99 ನೇ ವರ್ಷದಲ್ಲಿ ಶಬರಿಮಲೆಯಲ್ಲಿ ವಿಜಯ್ ಮಲ್ಯ ಖರ್ಚಿನಲ್ಲಿ ಚಿನ್ನ ಲೇಪಿಸಲಾಗಿತ್ತು. ಇದಕ್ಕಾಗಿ ಅಂದು ಅಗತ್ಯದ ದಾಖಲೆಗಳನ್ನು ಸಿದ್ದಪಡಿಸಲಾಗಿತ್ತು. ಈ ದಾಖಲೆಗಳು ನಾಪತ್ತೆಯಾಗಿವೆಯೆಂದು ತಿಳಿದು ಬಂದಿದೆ. ದಾಖಲೆಗಳು ನಾಪತ್ತೆಯಾದ ಘಟನೆಯ ಹಿಂದೆ ನಿಗೂಡತೆಯಿದೆಯೆಂದೂ ಹೇಳಲಾಗುತ್ತಿದೆ

0 Comments