ತಿರುವನಂತಪುರಂ: ಮನೆಯಲ್ಲಿ ಮದ್ಯ ಸೇವಿಸುವುದನ್ನು ಪ್ರಶ್ನಿಸಿದ ತಾಯಿಯನ್ನು ಮಗನೇ ಕೊಲೆಗೈದ ಘಟನೆ ನಡೆದಿದೆ. ತಿರುವನಂತಪುರಂ ಕಲ್ಲಿಯೂರು ಮನ ರಸ್ತೆಯ ವಿಜಯಕುಮಾರಿ (74) ಕೊಲೆಗೀಡಾದ ಮಹಿಳೆ. ಇವರ ಪುತ್ರ ಅಜಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ (ಬುದವಾರ) ರಾತ್ರಿ 11.45 ಕ್ಕೆ ಈ ದಾರುಣ ಘಟನೆ ನಡೆದಿದೆ.
ಪುತ್ರ ಅಜಯ್ ಕುಮಾರ್ ಮನೆಯಲ್ಲಿ ಮದ್ಯ ಸೇವಿಸುತ್ತಿರುವಾಗ ಬಾಟಲಿ ನೆಲಕ್ಕೆ ಬಿದ್ದು ಒಡೆಯಿತು. ಇದನ್ನು ಪ್ರಶ್ನಿಸಿದ ತಾಯಿ ವಿಜಯಕುಮಾರಿ, ಇನ್ನು ಮುಂದೆ ಮನೆಯಲ್ಲಿ ಮದ್ಯ ಸೇವಿಸಬಾರದು ಎಂದು ಹೇಳಿದ್ದರು. ಇದರಿಂದ ಕುಪಿತನಾದ ಅಜಯ್, ಮದ್ಯದ ತುಂಡಾದ ಬಾಟಲಿಯಿಂದ ತಾಯಿಯ ಕುತ್ತಿಗೆಗೆ ಇರಿದನೆನ್ನಲಾಗಿದೆ. ವಿಜಯಕುಮಾರಿ ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಮಾಹಿತಿ ತಿಳಿದು ಆಗಮಿಸಿದ ಪೊಲೀಸರು ಅಜಯ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ
 
 

 
 
 
 
 
 
 
 
 
 
 
 
 
 
 
 
 
 
 
 
0 Comments