ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ  ದರ್ಶನಕ್ಕೆ ಆಗಮಿಸಿದ ಕಾಸರಗೋಡಿನ ಭಕ್ತರನ್ನು ಹಣ ಪಡೆದು ಕಬಳಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು  ಪಂಪಾ ಪೊಲೀಸರು ಬಂಧಿಸಿದ್ದಾರೆ.  ಇಡುಕ್ಕಿ ಪೀರುಮೇಡು ನಿವಾಸಿಗಳಾದ ಕಣ್ಣನ್(32),  ರಘು(27) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಶಬರಿಮಲೆಯಲ್ಲಿ ಡೋಳಿ ಕಾರ್ಮಿಕರಾಗಿದ್ದಾರೆ. ಅಕ್ಟೋಬರ್ 18 ರಂದು ಘಟನೆ ನಡೆದಿದೆ. ತುಲಾ ಮಾಸ ಪೂಜೆಯ ವೇಳೆ ದರ್ಶನಕ್ಕಗಿ ಆಗಮಿಸಿದ ಕಾಸರಗೋಡು ನಿವಾಸಿಗಳಾದ ಭಕ್ತರನ್ನು ಇವರು ಹಣ ಪಡೆದು ವಂಚಿಸಿದ್ದರು. ಸರದಿ ಸಾಲಲ್ಲಿ ನಿಲ್ಲದೆ ನೇರ ದರ್ಶನ ಒದಿಗಿಸುವಿದಾಗಿ ಹೇಳಿ 10 ಸಾವಿರ ರೂ ಪಡೆದು ವಂಚಿಸಿದ್ದರು. ಕಾಸರಗೋಡು ನಿವಾಸಿಗಳಾದ ಭಕ್ತರನ್ನು ವಾವರ ನಡೆಯ ವರೆಗೆ ತಂದು ಇಬ್ಬರೂ ನಾಪತ್ತೆಯಾಗಿದ್ದರು. ಈ ಬಗ್ಗೆ ಅಯ್ಯಪ್ಪ ಭಕ್ತರು ನೀಡಿದ ದೂರಿನಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ
 
 

 
 
 
 
 
 
 
 
 
 
 
 
 
 
 
 
 
 
 
 
0 Comments