Ticker

6/recent/ticker-posts

Ad Code

ಪತಿಯಿಂದ ದೂರವಾಗಿ ಮಗನ ಜತೆ‌ ವಾಸಿಸುತ್ತಿದ್ದ ಪತ್ನಿ ಹಾಗೂ ಮೊಮ್ಮಗಳನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆಯ್ಯಲು ಯತ್ನ; ಪತಿಯ ಸ್ಥಿತಿ ಗಂಭೀರ


 ಕಾಞಂಗಾಡ್: ಪತಿಯಿಂದ ದೂರವಾಗಿ ಮಗನ ಜತೆ‌ ವಾಸಿಸುತ್ತಿದ್ದ ಪತ್ನಿ ಹಾಗೂ ಮೊಮ್ಮಗಳನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆಯ್ಯಲು ಯತ್ನಿಸಿದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಮಹಿಳೆ ಹಾಗೂ ಮಗು ಗಾಯಗಳಿಲ್ಲದೆ ಪಾರಾಗಿದ್ದು, ಬೆಂಕಿ ಹಚ್ಚಿದ ಪತಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪಾಣತ್ತೂರಿನಲ್ಲಿ ನಿನ್ನೆ (ಗುರುವಾರ) ರಾತ್ರಿ ಈ ಘಟನೆ ನಡೆದಿದೆ.

    ಪಾಣತ್ತೂರು ನೆಲ್ಲಿಕುನ್ನು ನಿವಾಸಿ ಜೋಸೆಫ್, ಪತ್ನಿ ಸಿಸಿಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು.ಸಿಸಿಲಿ ಮಗ ಶಾಜಿಯ ಮನೆಯಲ್ಲಿ ಆತನ ಪತ್ನಿ, ಪುತ್ರಿಯ ಜತೆ ವಾಸಿಸುತ್ತಿದ್ದರು. ನಿನ್ನೆ (ಗುರುವಾರ) ರಾತ್ರಿ  10.30 ರ ವೇಳೆ ಜೋಸೆಫ್ ಹೊರಗಿನಿಂದ ಕಿಟಿಕಿ ತೆರೆದು ಒಳಕ್ಕೆ ಪೆಟ್ರೋಲ್ ಚೆಲ್ಲಿ ಬೆಂಕಿ ಹಚ್ಚಿದ್ದಾರೆನ್ನಲಾಗಿದೆ. ಇದನ್ನು ಕಂಡು ಸಿಸಿಲಿ ಹಾಗೂ ಜತೆಗೆ ಮಲಗಿದ್ದ  ಮೊಮ್ಮಗಳು ಹೊರಗೆ ಓಡಿದರು. ಇದರಿಂದಾಗಿ ಇವರಿಬ್ಬರಿಗೆ ಬೆಂಕಿ ತಗುಲಲಿಲ್ಲ. ಮನೆಯ ಹೊರಗಿದ್ದ ಜೋಸೆಫ್ ಗೆ ಬೆಂಕಿ ತಗುಲಿದ್ದು ಸುಟ್ಟ ಗಾಯಗಳಾಗಿವೆ. ರಾಜಪುರಂ ಪೊಲೀಸರು ಹಾಗೂ ಊರವರು ಸೇರಿ ಬೆಂಕಿ ನಂದಿಸಿದರು. ಗಾಯಗೊಂಡ ಜೋಸೆಫ್ ರನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ

Post a Comment

0 Comments