Ticker

6/recent/ticker-posts

Ad Code

ಯುವಕರಿಗೆ ಮಾರಣಾಂತಿಕವಾಗಿ ಇರಿದ ಪ್ರಕರಣ; ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ


 ಕುಂಬಳೆ: ಯುವಕರಿಗೆ ಮಾರಣಾಂತಿಕವಾಗಿ ಇರಿದ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೊಗ್ರಾಲು ಪುತ್ತೂರು ಪನ್ನಿಕುನ್ನು ನಿವಾಸಿ ಕೆ.ಎ.ಮುಹಮ್ಮದ್ (45) ಬಂಧಿತ ಆರೋಪಿ. ಈತ ಮನೆಗೆ ಬಂದಿದ್ದಾನೆ ಎಂಬ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ‌

      2016 ಮೇ 6 ರಂದು ಕುಂಬಳೆ ಬದ್ರಿಯಾ ನಗರದ ಮುಹಮ್ಮದ್ ಹನೀಫ, ಪೂಚಕಣ್ಣನ್ ಶಂಶು ಎಂಬಿವರಿಗೆ ಮಾರಣಾಂತಿಕವಾಗಿ ಇರಿಯಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತನಾತ ಮುಹಮ್ಮದ್ ಅನಂತರ ಜಾಮೀನು ಪಡೆದು ತಲೆಮರೆಸಿಕೊಂಡಿದ್ದನು. ಕುಂಬಳೆ ಇನ್ಸ್ಪೆಕ್ಟರ್ ಟಿ.ಕೆ‌.ಮುಕುಂದ್ ಅವರ ಆದೇಶದಂತೆ ಎಸ್‌ಐ. ಎ.ಕೆ.ಶ್ರೀಜೇಶ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ

Post a Comment

0 Comments