Ticker

6/recent/ticker-posts

Ad Code

ಪೆರ್ಲ ನಾಲಂದಾ ಕಾಲೇಜಿನಲ್ಲಿ ಏಕತಾ ದಿನದ ಪ್ರತಿಜ್ಞೆ ಸ್ವೀಕಾರ


 ಪೆರ್ಲ: ಪೆರ್ಲ ನಾಲಂದಾ ಕಾಲೇಜಿನಲ್ಲಿ  ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ವಿದ್ಯಾರ್ಥಿಗಳು, ಬೋಧಕರು ಹಾಗೂ ಎನ್ನೆಸ್ಸೆಸ್ ಸ್ವಯಂಸೇವಕರು ರಾಷ್ಟ್ರದ ಏಕತೆ, ಅಖಂಡತೆ ಮತ್ತು ಸಹೋದರತ್ವವನ್ನು ಕಾಪಾಡುವ ಪ್ರತಿಜ್ಞೆ ಸ್ವೀಕರಿಸಿದರು. ಪ್ರಿನ್ಸಿಪಾಲ್ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಪ್ರಪ್ರಥಮ ಉಪ ಪ್ರಧಾನ ಮಂತ್ರಿ, ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್, ಸ್ವತಂತ್ರ ಭಾರತದ ಅಡಿಪಾಯವನ್ನು ಬಲಪಡಿಸಿದ ಏಕೀಕೃತ ಶಕ್ತಿಯಾಗಿದ್ದರು. ದೇಶವು ವಿಭಜನೆಯ ಹೊಸ್ತಿಲಲ್ಲಿದ್ದಾಗ ಭಾರತವನ್ನು ಒಗ್ಗೂಡಿಸಲು ಪ್ರಯತ್ನಿಸಿದರು. ರಾಷ್ಟ್ರೀಯ ಹಿತಾಸಕ್ತಿಯ ಪ್ರಜ್ಞೆಯೊಂದಿಗೆ, ಯಾವುದೇ ಕೆಲಸವನ್ನು ಸಾಧಿಸಬಹುದು ಎಂಬ ಸತ್ಯವನ್ನು ಅವರು ತೋರಿಸಿ ಕೊಟ್ಟಿದ್ದಾರೆ. ಪಟೇಲರ ಆಲೋಚನೆಗಳು ಇಂದಿಗೂ ಪ್ರಸ್ತುತ. ಅವರ 150ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಏಕತಾ ದಿವಸ್ ಆಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

Post a Comment

0 Comments