Ticker

6/recent/ticker-posts

Ad Code

ಬಿರಿಯಾಣಿಯ ಜತೆ ಸಲಾಡ್ ನೀಡದ ಕ್ಯಾಟರಿಂಗ್ ಕಾರ್ಮಿಕರಿಗೆ ಹಲ್ಲೆ; ಇಬ್ಬರ ವಿರುದ್ದ ಕೇಸು ದಾಖಲು


 ಬದಿಯಡ್ಕ:  ಮದುವೆ ಸಮಾರಂಭದಲ್ಲಿ ಬಿರಿಯಾಣಿಯ ಜತೆ ಸಲಾಡ್  ನೀಡದ ಪ್ರಕರಣದಲ್ಲಿ ಉಂಟಾದ ಘರ್ಷಣೆಗೆ ಸಂಬಂಧಿಸಿದಂತೆ ಇಬ್ಬರ ವಿರುದ್ದ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ‌. ಕಾಟರಿಂಗ್ ಕಾರ್ಮಿಕರಾದ ಪುತ್ತಿಗೆ ಚೇರಾಲ್ ನಿವಾಸಿ ಮುಹಮ್ಮದ್ ಶರಾಫುದ್ದೀನ್(21), ಗೆಳೆಯ ಇಂತಿಯಾಸ್ ಎಂಬಿವರಿಗೆ ಹಲ್ಲೆಗೈದ ಪ್ರಕರಣದಲ್ಲಿ ಅಬ್ಬಾಸ್, ಮಸೂದ್ ಎಂಬಿವರ ವಿರುದ್ದ ಕೇಸು ದಾಖಲಿಸಲಾಗಿದೆ.

     ಅಕ್ಟೋಬರ್ 12 ರಂದು ಪ್ರಕರಣ ನಡೆದಿತ್ತು. ಸೀತಾಂಗೋಳಿಯ ಆಡಿಟೋರಿಯಂನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಘರ್ಷಣೆ ನಡೆದಿತ್ತು. ಮದುವೆ ಸಮಾರಂಭದಲ್ಲಿ ಭಾಗವಹಿಸಿದವರಿಗೆ ಬಿರಿಯಾಣಿ ಜತೆ ನೀಡಿದ ಸಲಾಡ್  ಬಗ್ಗೆ ಜಗಳ ನಡೆದಿದೆ. ಸಲಾಡ್ ಮುಗಿದ ಕಾರಣ ಅಬ್ಬಾಸ್ ಹಾಗೂ ಮಸೂದ್ ಸೇರಿ ಇಂತಿಯಾಸ್ ಹಾಗೂ ಶರಾಫುದ್ದೀನ್ ರಿಗೆ ಹಲ್ಲೆಗೈದರು. ಶರಾಫುದ್ದೀನ್  ಮೊದಲು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಘಟನೆ ನಡೆದ ಸ್ಥಳವು ಬದಿಯಡ್ಕ ಠಾಣೆಯ ವ್ಯಾಪ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ಹಸ್ತಾಂತರಿಸಲಾಯಿತು

Post a Comment

0 Comments