Ticker

6/recent/ticker-posts

Ad Code

ಮಂಗಲ್ಪಾಡಿಯಲ್ಲಿ ಮುಸ್ಲಿಂ ಲೀಗಿನಿಂದ ಅರ್ಹ ಮತಗಳ ರದ್ದುಗೊಳಿಸಲು ಯತ್ನ: ಎಡರಂಗ ಆರೋಪ


 ಕುಂಬಳೆ: ಮಂಗಲ್ಪಾಡಿ ಪಂಚಾಯತಿನಲ್ಲಿ ನಿವೃತ್ತ ಉದ್ಯೋಗಿಯನ್ನು ಬಳಸಿ ವ್ಯಾಪಕವಾಗಿ  ಮತಗಳ ರದ್ದುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆಯೆಂದು ಎಡ ರಂಗ ದೂರಿದೆ. ಮಂಗಲ್ಪಾಡಿ ಪಂಚಾಯತಿನಲ್ಲಿ ಸೋಲಿನ ಭೀತಿಯಿಂದ ಭಯಗೊಂಡ ಮುಸ್ಲಿಂ‌ಲೀಗ್ ಆಡಳಿತ ಉಳಿಸಿಕೊಳ್ಳಲು ಹೀನಾಯ ಯತ್ನ ಮಾಡುತ್ತಿದೆ ಎಂದು ಎಡರಂಗ ಮಂಗಲ್ಪಾಡಿ ಪಂಚಾಯತು ಪದಾಧಿಕಾರಿಗಳು ಕುಂಬಳೆ ಪ್ರೆಸ್ ಫಾರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ದೂರಿದರು. ವಾರ್ಡುಗಳ ಅಧಿಕಾರ ಉಳಿಸಲು ಮುಸ್ಲಿಂ ಲೀಗ್ ಪ್ರಜಾಪ್ರಭುತ್ವ ವಿಧಾನವನ್ನು ಬುಡಮೇಲುಗೊಳಿಸುತ್ತಿದೆ ಎಂದವರು ದೂರಿದರು. ಎಡರಂಗ ಗೆಲುವು ಸಾಧ್ಯತೆಯಿರುವ ಬೂತುಗಳಲ್ಲಿ ನಿವೃತ್ತ ಅಧಿಕಾರಿಯನ್ನು ಬಳಸಿ ಮತಗಳ ರದ್ದುಗೊಳಿಸುವ ಕೆಲಸ ನಡೆಯುತ್ತಿದೆ ಎಂದು ದೂರಲಾಯಿತು. 14 ನೇ ವಾರ್ಡಿನಲ್ಲಿ ಅರ್ಹ ಮತದಾರರನ್ನು ರದ್ದುಗೊಳಿಸಿದ ಪ್ರಕ್ರಿಯೆ ಪ್ರಶ್ನಿಸಿದಾಗ ಜನಪ್ರತಿನಿಧಿಯೋರ್ವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಸಿಪಿಎಂ ಪಂಚಾಯತು ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಎನ್.ಸಿ.ಪಿ.(ಎಸ್) ಜಿಲ್ಲಾ ಕಾರ್ಯದರ್ಶಿ ಸಾದಿಕ್ ಕೈಕಂಬ, ಇತರರಾದ ಹನೀಫ ಸಿರಿಯ, ಇಬ್ರಾಹಿಂ‌ ಖಲೀಲ್, ಅಲ್ತಾಫ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು

Post a Comment

0 Comments