ಬದಿಯಡ್ಕ. ಹರಿತ ಕರ್ಮ ಉದ್ಯೋಗಿಗಳು ಕೃತಕ ಲೆಕ್ಕಾಚಾರ ನೀಡಿ ವ್ಯವಸ್ಥೆಯನ್ನು ತಲೆ ಕೆಳಗಾಗಿಸಲು ಪ್ರಯತ್ನಿಸಿದ್ದಾರೆಂಬ ಆರೋಪದಲ್ಲಿ ಇಬ್ಬರು ಹರಿತಾ ಕರ್ಮ ಉದ್ಯೋಗಿಗಳನ್ನು ಅಮಾನತುಗೈದು ವಿಜಿಲೆನ್ಸ್ ತನಿಖೆ ನಡೆಸಲು ಬದಿಯಡ್ಕ ಪಂಚಾಯತ್ ಆಡಳಿತ ಸಮಿತಿ ಸಭೆ ನಿರ್ಧರಿಸಿದೆ. ಹದಿನೇಳನೇ ವಾರ್ಡಿನ ಹರಿತ ಕರ್ಮ ಸೇನೆಯ ಕಾರ್ಯಕರ್ತೆಯಾದ ಎಣಿಯರ್ಪು ಲೈಫ್ ವಿಲ್ಲದ ಸೀನತ್ ಎಣಿಯರ್ಪು ಹಾಗೂ ಶಾರದ ಎಂಬಿವರನ್ನಾಗಿದೆ ಕೆಲಸದಿಂದ ಅಮಾನತುಗೈಯಲು ಹಾಗೂ ವಿಜಿಲೆನ್ಸ್ ಸಮಗ್ರ ತನಿಖೆಗೊಳಪಡಿಸಲು ಮಂಗಳವಾರ ಸೇರಿದ ಆಡಳಿತ ಸಮಿತಿಯ ಸಭೆ ನಿರ್ಧರಿಸಿದೆ. ಪಂಚಾಯತ್‌ನ 19 ಸದಸ್ಯರಲ್ಲಿ 17 ಜನಪ್ರತಿನಿಧಿಗಳ ಬೆಂಬಲದೊಂದಿಗೆ ಸಭೆ ಈ ನಿರ್ಣಯ ಕೈಗೊಂಡಿದೆ.
ವಾರ್ಡ್ ವ್ಯಾಪ್ತಿಯಲ್ಲಿ ಹರಿತ ಕರ್ಮ ಕಾರ್ಯಕರ್ತರು ಯುಸರ್ ಫೀಸ್ ರೂಪದಲ್ಲಿ ಸಂಗ್ರಹಿಸುವ ಮೊತ್ತವನ್ನು ಬ್ಯಾಂಕಿನಲ್ಲಿ ಪಾವತಿಸಬೇಕಾಗಿರುವುದು ನಿಯಮವಾಗಿದೆ. ಇವರು ಹೀಗೆ ಸಂಗ್ರಹಿಸಿದ ಮೊತ್ತವನ್ನು ಪೂರ್ಣ ಪಾವತಿಸದೆ ಪಂಚಾಯತ್ ಕಛೇರಿಯಲ್ಲಿ ನೀಡುವ ರಶೀದಿಯಲ್ಲಿ ಮಾತ್ರ ಕೃತಕ ಲೆಕ್ಕಚಾರ ನೀಡಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಹಲವು ಪಕ್ಷಗಳು ಸಂಘಟನಾತ್ಮಕವಾಗಿ ಔಪಚಾರಿಕ ಖಂಡನೆ ವ್ಯಕ್ತಪಡಿಸಿತ್ತು ಮಾತ್ರವಲ್ಲದೆ ಆಡಳಿತ ಸಮಿತಿಯು ಇದನ್ನು ಪರಿಣಾಮಕಾರಿಯಾಗಿ ಗಣನೆಗೆ ತೆಗೆದುಕೊಂಡು ತನಿಖೆ ನಡೆಸಲು ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ಹರಿತ ಕರ್ಮದ ಪರಿಶೋಧಕ ವಿಭಾಗ ಎಲ್ಲಾ ವಾರ್ಡ್‌ಗಳಲ್ಲಿಯೂ ಹರಿತ ಕರ್ಮ ಸೇನೆಗಳ ಲೆಕ್ಕಚಾರವನ್ನು ಪರಿಶೀಲನೆ ನಡೆಸಿದ ಬಳಿಕವಷ್ಟೆ ಕೃತಕ ಲೆಕ್ಕಾಚಾರದ ಮೊತ್ತವನ್ನು ಕಂಡುಹಿಡಿಯಲು ಸಾಧ್ಯವಾಗಬಹುದು ಎಂದು ಪಂಚಾಯತು ಅಧ್ಯಕ್ಷೆ ಬಿ.ಶಾಂತ ಸ್ಪಷ್ಟಪಡಿಸಿದ್ದಾರೆ.
0 Comments