Ticker

6/recent/ticker-posts

Ad Code

ಕುರೆಡ್ಕ ಉನ್ನತಿಯ ಫಲಾನುಭವಿಗಳಿಗೆ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ


ಪೆರ್ಲ : ಕೇರಳ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವಿಭಾಗ ಅಭಿವೃಧ್ಧಿ ಇಲಾಖೆಯ ಆಶ್ರಯದಲ್ಲಿ ಸಾಮಾಜಿಕ ಒಗ್ಗಟ್ಟು ವಾರಾಚರಣೆ ಅಂಗವಾಗಿ ಪರಿಶಿಷ್ಟ ವರ್ಗ ಅಭಿವೃಧ್ಧಿ ಇಲಾಖೆ ಕಾಸರಗೋಡು ಎಣ್ಮಕಜೆ TEO ಹಾಗೂ ಸರಕಾರಿ ಆಯುರ್ವೇದ ಡಿಸ್ಪೆನ್ಸರಿ ಬೇಳ (ಟ್ರೈಬಲ್)  ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಕುರೆಡ್ಕ ಉನ್ನತಿಯ ಕೆ.ಪಿ. ಮದನ ಮಾಸ್ಟರ್ ಸ್ಮಾರಕ ಗ್ರಂಥಾಲಯ ಪರಿಸರದಲ್ಲಿ ನಡೆಯಿತು. ವೈದ್ಯರಾದ ಬೇಳ ಆಯುರ್ವೇದ ಡಿಸ್ಪೆನ್ಸರಿ ಮೆಡಿಕಲ್ ಆಫೀಸರ್ ಡಾ. ಜಯಶ್ರೀ.ಕೆ, ಪೈವಳಿಕೆ ಆಯುಶ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮೆಡಿಕಲ್ ಆಫೀಸರ್ ಡಾ.ಗಣೇಶ ಕುಮಾರ್.ಕೆ ರೋಗಿಗಳನ್ನು ಪರಿಶೋಧಿಸಿದರು, ವಾರ್ಡ್ ಮೆಂಬರ್ ಸೌಧಾಬಿ ಹನೀಫ್, ಬೇಳ ಡಿಸ್ಪೆನ್ಸರಿ ಫಾರ್ಮಾಸಿಸ್ಟ ಅಶ್ವಿನ್, ಪಿಡಿಎಸ್ ಶಿವರಾಮ ನಾಯ್ಕ,ಎಸ್.ಟಿ.  ಪ್ರೊಮೋಟರ್ ಅಶೋಕ, ಟ್ರೈಬಲ್ ಆಫೀಸ್ ನ ಚನಿಯಪ್ಪ ನಾಯ್ಕ,ಗ್ರಂಥಪಾಲಕಿ ಶಾರದಾ ಎಂಬವರು ಶಿಬಿರದ ನೇತೃತ್ವವಹಿಸಿದರು.

Post a Comment

0 Comments