Ticker

6/recent/ticker-posts

Ad Code

ಇರಿಯಣ್ಣಿಯಲ್ಲಿ ಮತ್ತೆ ಚಿರತೆ ಹಾವಳಿ, ಮನೆಯಂಗಳದಲ್ಲಿ‌ ಮಲಗಿದ್ದ ಸಾಕು ನಾಯಿಯನ್ನು ಕೊಂದು ಪರಾರಿ


 ಮುಳಿಯಾರು: ಇರಿಯಣ್ಣಿ ಪರಿಸರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆಯೆಂದು ತಿಳಿದುಬಂದಿದೆ. ಇರಿಯಣ್ಣಿ ಪಯ ಎಂಬಲ್ಲಿ ನಿವೃತ್ತ ಅಧ್ಯಾಪಕ ಗಣಪತಿ ಭಟ್ಟ ಎಂಬವರ ಮನೆಯಂಗಳದಲ್ಲಿ ‌ಮಲಗಿದ್ದ ಸಾಕು ನಾಯಿಯನ್ನು ಚಿರತೆ ಕೊಂದು ಹಾಕಿದೆ. ನಿನ್ನೆ (ಸೋಮವಾರ) ಮುಂಜಾನೆ 3 ಗಂಟೆಯ ವೇಳೆ ಈ ಘಟನೆ ನಡೆದಿದೆ. ಬೊಬ್ಬೆ ಕೇಳಿ ಗಣಪತಿ ಭಟ್ಟರು ಟಾರ್ಚ್ ಬೆಳಗಿದಾಗ ಚಿರತೆ ನಾಯಿಯನ್ನು ಕಚ್ಚಿ ಓಡುವುದು ಕಂಡು ಬಂತು. ಕೂಡಲೇ ನೆರೆ ಮನೆಯವರನ್ನು ಕರೆದು ಹುಡುಕಿದಾಗ ನಾಯಿಯನ್ನು ಬಿಟ್ಟು ಚಿರತೆ ಪರಾರಿಯಾಯಿತು. ಬಂದಡ್ಕ, ಮಾಣಿಮೂಲೆ ಸಹಿತ ವಿವಿದೆಡೆ ಚಿರತೆ ಭೀತಿಯಿದೆ. ಇದೀಗ ಇರಿಯಣ್ಣಿ ಬಳಿಯೂ ಕಂಡು ಬಂದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ

Post a Comment

0 Comments