Ticker

6/recent/ticker-posts

Ad Code

ಅಭಿವೃದ್ದಿ ಕುಂಠಿತ ಆರೋಪ; ಬದಿಯಡ್ಕ ಗ್ರಾಮ ಪಂಚಾಯತು ಕಚೇರಿಗೆ ಸಿಪಿಎಂ ಮುತ್ತಿಗೆ

ಬದಿಯಡ್ಕ:  ಬದಿಯಡ್ಕ ಪಂಚಾಯತಿನಲ್ಲಿ ಕಳೆದು ಹೋದ ಐದು ವರ್ಷಗಳ ಅಭಿವೃದ್ಧಿ ಕುಂಠಿತ, ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲದ ಆಡಳಿತ ಸಹಿತ ವಿವಿದ ವಿಷಯಗಳ ಬಗ್ಗೆ ಪ್ರತಿಭಟಿಸಿ  ಸಿಪಿಎಂ ಪಂಚಾಯತು ಸಮಿತಿಯ ಆಶ್ರಯದಲ್ಲಿ ಗ್ರಾಮ‌ ಪಂಚಾಯತು ಕಚೇರಿಗೆ ಮುತ್ತಿಗೆ ನಡೆಯಿತು. 
ಸಿಪಿಎಂ ಬದಿಯಡ್ಕ ಲೋಕಲ್ ಸಮಿತಿ ಕಚೇರಿ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿದ್ದು ಗ್ರಾಮ ಪಂಚಾಯತು ಕಚೇರಿ ಬಳಿ ಕೊನೆಗೊಂಡಿತು. ಸಿಪಿಎಂ ಜಿಲ್ಲಾಸೆಕ್ರಟರಿಯೇಟ್ ಸದಸ್ಯ ವಿ.ಪಿ.ಪಿ.ಮುಸ್ತಫ ಉದ್ಘಾಟಿಸಿದರು. 
ಏರಿಯ ಸಮಿತಿ ಸದಸ್ಯ ಪಿ.ರಂಜಿತ್ ಅಧ್ಯಕ್ಷತೆ ವಹಿಸಿದರು. ಪಂಚಾಯತು ಸಮಿತಿ ಕಾರ್ಯದರ್ಶಿ ಪ್ರಕಾಶ್ ಅಮ್ಮಣ್ಣಾಯ ಸ್ವಾಗತಿಸಿದರು. ಏರಿಯ ಕಾರ್ಯದರ್ಶಿ ಸಜ.ಎ.ಸುಬೈರ್, ಏರಿಯ ಸದಸ್ಯರಾದ ಬಿ.ಶೋಭ, ಕೆ.ಶಾರದ, ಬದಿಯಡ್ಕ ಲೋಕಲ್ ಕಾರ್ಯದರ್ಶಿ ಎಸ್.ಶ್ರೀಕಾಂತ್,ನೀರ್ಚಾಲು ಲೋಕಲ್ ಕಾರ್ಯದರ್ಶಿ ಸುಬೈರ್ ಬಾಪಾಲಿಪನಂ, ಇತರರಾದ ಎಂ.ಮದನ, ಚಂದ್ರನ್ ಪೊಯ್ಯಕಂಡಂ,  ವತ್ಸಲ ಮೊದಲಾದವರು ಮಾತನಾಡಿದರು
 

Post a Comment

0 Comments