Ticker

6/recent/ticker-posts

Ad Code

ಲಾರಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮಂಗಳೂರು ಆಸ್ಪತ್ರೆಯಲ್ಲಿ ಮೃತ್ಯು


 ಕಾಸರಗೋಡು: ಲಾರಿ ಡಿಕ್ಕಿ ಹೊಡೆದು ಗಾಯಗೊಂಡ ಸ್ಕೂಟರ್ ಪ್ರಯಾಣಿಕ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಚೆಂಬರಿಕ ತುರುತ್ತಿ ನಿವಾಸಿ ಅಬ್ದುಲ್ ರಹಮಾನ್(62) ಮೃತಪಟ್ಟ ವ್ಯಕ್ತಿ.  ಮಂಗಳವಾರದಂದು ಮೇಲ್ಪರಂಬ ಜಂಕ್ಷನ್ ಬಳಿ ಅಬ್ದುಲ್ ರಹಮಾನ್ ಚಲಾಯಿಸಿದ ಸ್ಕೂಟರಿಗೆ ಕಾಸರಗೋಡು ಭಾಗದಿಂದ ಕಾಞಂಗಾಡಿಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ನಿನ್ನೆ ಅವರು ಕೊನೆಯುಸಿರೆಳೆದರು. ಮೃತರು ಪ್ರಾದೇಶಿಕ ಮುಸ್ಲಿಂ ಲೀಗ್ ನೇತಾರರಾಗಿದ್ದಾರೆ

Post a Comment

0 Comments