ನೀರ್ಚಾಲು: ಇಲ್ಲಿನ ಏಣಿಯರ್ಪು, ಪುದುಕೋಳಿ ಪರಿಸರಗಳಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಉಂಟಾಗಿದೆ. ಓರ್ವರಿಗೆ ನಾಯಿ ಕಚ್ಚಿದ್ದು ಹಲವರನ್ನು ಬೆದರಿಸಿದೆ.ಪುದುಕ್ಕೋಳಿ ಪರಿಶಿಷ್ಟ ಜಾತಿ ಉನ್ನತಿಯ ಸುರೇಶ್(46) ಎಂಬವರಿಗೆ ಬೀದಿ ನಾಯಿ ಕಡಿತ ಉಂಟಾಗಿದೆ. ಏಣಿಯರ್ಪು ಬಳಿ ಆಟವಾಡುತ್ತಿದ್ದ ಮಕ್ಕಳನ್ನು ಕಚ್ಚಲು ಯತ್ನಿಸಿದ್ದು, ಮಕ್ಕಳು ಮನೆಯೊಳಗೆ ಓಡಿ ಹೋಗಿದ್ದಾರೆ. ಹಲವು ಸಾಕು ನಾಯಿಗಳಿಗೂ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ.
ಎರಡು ತಿಂಗಳ ಹಿಂದೆ ಏಣಿಯರ್ಪಿನಲ್ಲಿ 3 ಮಂದಿಗೆ, ಪುದುಕೋಳಿ ಪರಿಸರದಲ್ಲಿ ಇಬ್ಬರಿಗೂ ಬೀದಿ ನಾಯಿ ಕಡಿತ ಉಂಟಾಗಿತ್ತು. ಇದರ ಆತಂಕ ದೂರಾಗುವ ಮುನ್ನವೇ ಮತ್ತೆ ಬೀದಿ ನಾಯಿ ಹಾವಳಿ ಉಂಟಾಗಿರುವುದು ಜನರಲ್ಲಿ ಭೀತಿ ಇಮ್ಮಡಿಗೆ ಕಾರಣವಾಗಿದೆ
0 Comments