Ticker

6/recent/ticker-posts

Ad Code

ಮಹಿಳೆ ಗ್ರಾಮೀಣತೆಯ ಜತೆಗೆ ಬೆಳೆಯುವುದು ಸಂಸ್ಕೃತಿಯ ಲಕ್ಷಣ - ಮಲ್ಲಿಕಾ ಪಕ್ಕಳ


ಸ್ವಾದಿಷ್ಟತೆಯನ್ನು ಉಣ ಬಡಿಸಿದ  ಬೆಳ್ಳೂರಿನ ಬಂಟ ಮಹಿಳಾ ಸಂಘದ ಅಡುಗೆ ಸ್ಪರ್ಧೆ

ಮುಳ್ಳೇರಿಯ : ಬಂಟ ಮಹಿಳಾ ಸಂಘ ಬೆಳ್ಳೂರು ಇದರ 20ನೇ ವಾರ್ಷಿಕೋತ್ಸವದ ಅಂಗವಾಗಿ  13ನೇ ಕಾರ್ಯಕ್ರಮವಾಗಿ  ಬಂಟ ಅಡುಗೆ ಸ್ಪರ್ಧೆ ಸ್ವಾದಿಷ್ಟತೆಯ ಸವಿಯನ್ನು ಉಣ ಬಡಿಸಿತು. ಪಿಂಡಗ ದಿ|ರಾಮ್‌ ಮೋಹನ್ ರೈಯವರ ಮನೆ ಪಿಂಡಗ ಕೃಷ್ಣನಿವಾಸದಲ್ಲಿ ಜರಗಿದ  ಕಾರ್ಯಕ್ರಮವನ್ನು  ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಸರಕಾರದ ಸದಸ್ಯೆ ಮಲ್ಲಿಕಾ ಪಕ್ಕಳ ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರು ಗ್ರಾಮೀಣತೆಯ ಜತೆಗೆ  ಬೆಳೆಯುವುದು , ಅನನ್ಯ ಸಾಧನೆಗಳನ್ನು ಗಳಿಸುವುದು  ಸಂಸ್ಕೃತಿಯ ಲಕ್ಷಣವಾಗಿದೆ. ಪೇಟೆ ಪಟ್ಟಣಗಳ ವಾತವರಣದಲ್ಲಿ ಬೆಳೆಯುವುದಕ್ಕಿಂತ ಹಳ್ಳಿಗಾಡಿನಲ್ಲಿ ನಮ್ಮ ಸಂಸ್ಕೃತಿ ರೂಫಿಕರಣಕ್ಕೆ ಸೂಕ್ತ ಸದಾವಕಾಶ ಲಭಿಸುತ್ತದೆ ಎಂದರು. ಬಂಟ ಮಹಿಳಾ ಸಂಘದ ಅಧ್ಯಕ್ಷೆ ಡಾ. ವಿದ್ಯಾಮೋಹನ್‌ದಾಸ್ ರೈ ಬೆಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಬಂಟರ ಸಂಘ ಉಪಾಧ್ಯಕ್ಷೆ ಶ್ಯಾಮಲಾ ಶೆಟ್ಟಿ,ಬಂಟ ಮಹಿಳಾ ಸಂಘ, ಪುತ್ತೂರು ಅಧ್ಯಕ್ಷೆ ಗೀತಾ ಮೋಹನ್ ರೈ, ಚಲನಚಿತ್ರ ನಟಿ ಭವ್ಯಶ್ರೀ ರೈ ಮುಖ್ಯ ಅತಿಥಿಗಳಾಗಿದ್ದರು.ಜಯಲಕ್ಷ್ಮಿ ಕೆ.ಶೆಟ್ಟಿ ಕಳ್ವಾಜೆ,ಸುಜಾತ ರಾಮ್ ಮೋಹನ್ ರೈ ಪಿಂಡಗ ಉಪಸ್ಥಿತರಿದ್ದರು. ಶ್ಯಾಮಲಾ ಎಸ್.ರೈ ಪ್ರಾರ್ಥನೆ ಹಾಡಿದರು. ಲತಾ ಸುಂದರ್‌ರಾಜ್ ರೈ ಸ್ವಾಗತಿಸಿ , ಶ್ರುತಿ ಎಡಮೊಗರು ನಿರೂಪಿಸಿದರು. ವಿವಿಧ ಮನೋರಂಜನಾ ಕಾರ್ಯಕ್ರಮ,  ಸ್ಪರ್ಧೆಗಳು ನಡೆಯಿತು.

Post a Comment

0 Comments