Ticker

6/recent/ticker-posts

Ad Code

ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶಾಶ್ವತ ಪೂಜಾ ಅಭಿಯಾನ


 ಬದಿಯಡ್ಕ: ಜನ್ಮದಿನವನ್ನು ಐಶಾರಾಮಿಯಾಗಿ ಆಚರಿಸುವ ಬದಲು ಊರಿನ ದೇವಸ್ಥಾನ, ಭಜನಾ ಮಂದಿರಗಳಲ್ಲಿ ಆ ದಿನದಂದು ಶಾಶ್ವತ ಪೂಜೆಯ ಸಂಕಲ್ಪವನ್ನು ತೊಟ್ಟುಕೊಂಡು ಆಚರಿಸಬೇಕು. ಇದು ನಮ್ಮ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಪೂರಕವಾಗುವುದರೊಂದಿಗೆ ಮುಂದಿನ ಪೀಳಿಗೆಯು ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಮುಂದುವರಿಸಿಕೊAಡು ಹೋಗಲು ಕಾರಣವಾಗುತ್ತದೆ ಎಂದು ನಿವೃತ್ತ ಬ್ಯಾಂಕ್ ಪ್ರಬಂಧಕ ಕಾಟಿಪಳ್ಳ ಸುಬ್ರಹ್ಮಣ್ಯ ಹೇಳಿದರು. ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶಾಶ್ವತ ಪೂಜಾ ಅಭಿಯಾನದ ಭಾಗವಾಗಿ ಪುದುಕೋಳಿ ಶ್ರೀಕೃಷ್ಣಭಟ್ಟರಿಗೆ ರಶೀದಿಯನ್ನು ಹಸ್ತಾಂತರಿಸಿ ಅವರು ಮಾತನಾಡಿದರು. ಅದೆಷ್ಟೋ ಹಣವನ್ನು ಪೋಲು ಮಾಡಿ ಆರೋಗ್ಯವನ್ನು ಕೆಡಿಸಿಕೊಳ್ಳುವಂತಹ ಜನ್ಮದಿನಾಚರಣೆ, ಮೋಜು ಮಾಡುವ ಹಣವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಬಳಸಿಕೊಂಡಾಗ ನಮ್ಮ ಆರೋಗ್ಯ, ನಮ್ಮೊಳಗಿನ ಸಾತ್ವಿಕ ಮನೋಭಾವ, ಚಿಂತನೆ ವೃದ್ಧಿಯಾಗುತ್ತದೆ ಎಂದರು.

ಸೇವಾಸಮಿತಿ ಅಧ್ಯಕ್ಷ ನರಸಿಂಹ ಭಟ್ ಕಾರ್ಮಾರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಧ್ಯಾಪಕ ಕಕ್ಕಳ ಕೃಷ್ಣ ಭಟ್, ಆಡಳಿತ ಮೊಕ್ತೇಸರ ರಾಧಾಕೃಷ್ಣ ರೈ ಕಾರ್ಮಾರು ಉಪಸ್ಥಿತರಿದ್ದರು. ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿ, ಯುವಕ ವೃಂದದ ಅಧ್ಯಕ್ಷ ವಿಜಯಕುಮಾರ್ ಮಾನ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವರಿಗೆ ನವಾನ್ನ ಸಮರ್ಪಣೆ ಹಾಗೂ ಬಲಿವಾಡುಕೂಟದಲ್ಲಿ ಊರಪರವೂರ ಭಗವದ್ಭಕ್ತರು ಪಾಲ್ಗೊಂಡಿದ್ದರು.

Post a Comment

0 Comments