Ticker

6/recent/ticker-posts

Ad Code

ಇ.ಡಿ.ಪ್ರಸಾದ್ ಶಬರಿಮಲೆಯ ಮೇಲ್ ಶಾಂತಿ, ಮನು ನಂಬೂದಿರಿ ಮಾಳಿಕಪುರಂ ಮೇಲ್ ಶಾಂತಿಯಾಗಿ ಆಯ್ಕೆ ,


 ಪತ್ತನಂತಿಟ್ಟ: ಮುಂದಿನ ಮಂಡಲ, ಮಕರ ಉತ್ಸವ ಸಹಿತ ಒಂದು ವರ್ಷದ ಕಾಲಾವಧಿಗೆ ಶಬರಿಮಲೆಯ ಹಾಗೂ ಮಾಳಿಕಪುರಂ ಕ್ಷೇತ್ರಗಳ ಮುಖ್ಯ ಅರ್ಚಕ (ಮೇಲ್ ಶಾಂತಿ) ರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಇಂದು (ಶನಿವಾರ) ಬೆಳಗ್ಗೆ ಶವರಿಮಲೆಯಲ್ಲಿ ನಡೆದ ಚೀಟಿ ಎತ್ತುವ ಕಾರ್ಯಕ್ರಮದಲ್ಲಿ ದೇವಸ್ವಂ ಬೋರ್ಡ್ ಪ್ರತಿನಿಧಿಗಳು, ತಂತ್ರಿ ಕುಟುಂಬ ಸದಸ್ಯರು ಭಾಗವಹಿಸಿದರು.

 ತ್ರಿಶೂರು ಚಾಲಕುಡಿ ನಿವಾಸಿ, ಏರನ್ನೂರು ಮನೆಯ ಇ.ಡಿ.ಪ್ರಸಾದ್ ಶಬರಿಮಲೆಯ ಮೇಲ್ ಶಾಂತಿಯಾಗಿ ಆಯ್ಕೆಯಾಗಿದ್ದಾರೆ. ಆರೇಶ್ವರಂ ಶ್ರೀಧರ್ಮಶಾಸ್ತಾ ಕ್ಷೇತ್ರದ ಅರ್ಚಕರಾಗಿರುವ ಅವರು  ಇದೀಗ ಶಬರಿಮಲೆಯ ಮೇಲ್ ಶಾಂತಿಯಾಗಿ ಆಯ್ಜೆಯಾಗುತ್ತಿದ್ದಾರೆ.  ಕೊಲ್ಲಂ ಕುಟ್ಟಿಕಡ ನಿವಾಸಿ ಮನು ನಂಬೂದಿರಿ ಮಾಳಿಕಪುರಂ ಕ್ಷೇತ್ರದ ಮೇಲ್ ಶಾಂತಿಯಾಗಿ ಆಯ್ಕೆಯಾಗಿದ್ದಾರೆ. ಮನು ನಂಬೂದಿರಿ ಅವರು ಮಾಳಿಕಪುರಂ ಕ್ಷೇತ್ರದಲ್ಲಿ 3 ನೇ ಬಾರಿ ಮೇಲ್ ಶಾಂತಿಯಾಗಿ ಆಯ್ಕೆಯಾಗಯತ್ತಿದ್ದಾರೆ

Post a Comment

0 Comments