ಕುಂಬಳೆ: ನಿಯಂತ್ರಣ ತಪ್ಪಿದ ಸ್ಕೂಟರ್ ಗೋಡೆಗೆ ಬಡಿದು ಉಂಟಾದ ಅಫಘಾತದಲ್ಲಿ ಗಾಯಗೊಂಡಿದ್ದ 10 ನೇ ತರಗತಿಯ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಬಂಬ್ರಾಣ ಚೂರಿತ್ತಡ್ಕ ನಿವಾಸಿ ರಸಾಖ್- ರಂಸೀನ ದಂಪತಿಯ ಪುತ್ರಿ ರಿಸ್ವಾನ(15) ಮೃತಪಟ್ಟ ವಿದ್ಯಾರ್ಥಿನಿ. ಈಕೆ ಕೊಡಿಯಮ್ಮ ಶಾಲೆಯ ವಿದ್ಯಾರ್ತಿನಿಯಾಗಿದ್ದಾಳೆ. ಇಂದು(ಗುರುವಾರ) ಬೆಳಗ್ಗೆ ಕೊಡಿಯಮ್ಮ ಪೂಕಟ್ಟೆ ಬಳಿ ಈ ಘಟನೆ ನಡೆದಿದೆ.
ರಿಸ್ವಾನ ಹಾಗೂ ಗೆಳತೊಯರಯ ಸ್ಕೂಟರಿನಲ್ಲಿ ಟ್ಯೂಶನಿಗೆ ಹೋಗುವ ವೇಳೆ ಅಫಘಾತ ಉಂಟಾಗಿದೆ. ಗಾಯಗೊಂಡವರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ರಿಸ್ವಾನಳ ಸ್ಥಿತಿ ಗಂಭೀರವಾಗ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಆಕೆ ಕೊನೆಯುಸಿರೆಳೆದಳೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಮೃತಳು ತಂದೆ, ತಾಯಿ, ಸಹೋದರ ಸೋದರಿಯರಾದ ರಿಶಾನ್, ರಿದ, ರಿಫ, ರೈಹಾನ್ ಎಂಬಿವರನ್ನು ಅಗಲಿದ್ದಾರೆ

0 Comments