ಕಾಸರಗೋಡು: ಜೀಪಿನಲ್ಲಿ ಎರಡೂವರೆ ಕಿಲೊ ಗಾಂಜ ಸಾಗಿಸುವ ವೇಳೆ ಬಂಧಿತರಾದ ಆರೋಪಿಗಳಿಗೆ ತಲಾ ಎರಡು ವರ್ಷ ಕಠಿಣ ಸಜೆ ಹಾಗೂ 30 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಮಟ್ಟನ್ನೂರು ನಿವಾಸಿಗಳಾದ ರನೀಸ್(36), ಮಹರೂಫ್ (35) ಎಂಬಿವರಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಶಿಕ್ಷೆ ನೀಡಿದೆ. ದಂಡ ವಿಧಿಸದಿದ್ದರೆ 3 ತಿಂಗಳು ಅಧಿಕ ಸಜೆ ಅನುಭವಿಸಬೇಕು.
2020 ಅಗೋಸ್ಟ್ 1 ರಂದು ರಾತ್ರಿ 10 ಗಂಟೆಗೆ ಕರಂದಕ್ಕಾಡಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗಾಂಜಾ ವಶಪಡಿಸಲಾಗಿತ್ತು. ಕಾಸರಗೋಡು ಎಸ್.ಐ.ಇ.ವಿನೋದ್ ಕುಮಾರ್, ವನಿತಾ ಎಸ್.ಐ.ರೂಪ ಮಧುಸೂಧನ್ ಎಂಬಿವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು

0 Comments