Ticker

6/recent/ticker-posts

Ad Code

ಪತ್ರಿಕಾಗೋಷ್ಠಿ ಕರೆದ ರಾಜ್ಯ ಚುನಾವಣಾ ಆಯೋಗ; ಇಂದು ರಾಜ್ಯ ಪಂಚಾಯತು ಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ


 ತಿರುವನಂತಪುರಂ: ರಾಜ್ಯದಲ್ಲಿ ಪಂಚಾಯತು ಚುನಾವಣೆಯ ಕಹಳೆ ಮೊಳಗುತ್ತಿರುವಂತೆಯೇ ಇಂದು (ಸೋಮವಾರ) ರಾಜ್ಯ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ಕರೆದಿದೆ. ಇಂದು ಮದ್ಯಾಹ್ನ 12 ಗಂಟೆಗೆ  ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಲಿದ್ದು ಪಂಚಾಯತು ಚುನಾವಣೆಯ ದಿನಾಂಕ ಘೋಷಿಸುವ ಸಾಧ್ಯತೆಯಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆಯೋ ಅತನಾ ವಿವಿದ ಹಂತಗಳಿರಬಹುದೇ ಎಂದು ಕಾದು ನೋಡಬೇಕು.

 ‌‌ರಾಜ್ಯದಲ್ಲಿ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಯಾದಿ ಅಂತಿಮಗೊಳಿಸಿದೆ ಎಂದು ತಿಳಿದು ಬಂದಿದೆ. ಘೋಷಣೆ ಮಾತ್ರ ಬಾಕಿಯಿದೆ.

    ಕಾಂಗ್ರೆಸ್ ಹಾಗೂ ಬಿಜೆಪಿ ತಿರುವನಂತಪುರಂನಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಎಡಪಕ್ಷವು ತಮ್ಮ ಸೀಟು ಹಂಚಿಕೆ ಪೂರ್ಣಗೊಳಿಸಿದೆ. ಮುಂದಿನ ದಿನಗಳಲ್ಲಿ ಚುನಾವಣೆ ಬಿಸಿಯೇರಲಿದೆ. ಡಿಸೆಂಬರ್ 21 ರಂದು ಹೊಸ ಆಡಳಿತ ಸಮಿತಿ ಅಧಿಕಾರ ವಹಿಸಲಿದ್ದು, ಡಿಸೆಂಬರ್ ಮೊದಲವಾರ ಚುನಾವಣೆ ನಡೆಯುವ ಸಾಧ್ಯತೆಯಿದೆ.

Post a Comment

0 Comments