Ticker

6/recent/ticker-posts

Ad Code

ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಲಾರಿ ಚಾಲಕ ಮೃತ್ಯು


 ಅಡೂರು: ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಲಾರಿ ಚಾಲಕ ಮೃತಪಟ್ಟ ಘಟನೆ ನಡೆದಿದೆ. ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ನಿವಾಸಿ ಕಿರಣ್(36) ಮೃತಪಟ್ಟ ಯುವಕ. ಅಕ್ಟೋಬರ್  26 ರಂದು ಸಂಜೆ ಪಂಜಿಲ್ಲು ತೂಗುಸೇತುವೆ ಬಳಿ‌ ನಿಲ್ಲಿಸಿದ್ದ ಕಾರಿನೊಳಗೆ ಕಿರಣ್ ಮೂರ್ಚಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಊರವರು ಇವರನ್ನು ಕೂಡಲೇ ಸುಳ್ಯ ಆಸ್ಪತ್ರೆಗೆ ತಲುಪಿಸಿದರು. ಸುಳ್ಯ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಇಲಿ ವಿಷ ಹೊಟ್ಟೆಯೊಳಗೆ ಸೇರಿರುವುದು ತಿಳಿದು ಬಂತು. ಅವರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ನಿನ್ನೆ ಮುಂಜಾನೆ ಅವರು ಕೊನೆಯುಸಿರೆಳೆದರು. ಆದೂರು ಪೊಲೀಸರು ಕೇಸು ದಾಖಲಿಸಿದರು. ಇವರು ತಂದೆ ವಣ್ಣಪ್ಪ ಗೌಡ, ತಾಯಿ ಕುಸುಮಾವತಿ, ಪತ್ನಿ ಪುನಿತ, ಮಕ್ಕಳಾದ ಅಭಿರಾಂ, ದಿಯಾರಾಂ, ತೀರ್ಥ ಎಂಬಿವರನ್ನು ಅಗಲಿದ್ದಾರೆ

Post a Comment

0 Comments