Ticker

6/recent/ticker-posts

Ad Code

ಉಪ್ಪಳದಲ್ಲಿ ಪತ್ತೆಯಾದ ಮೃತದೇಹ ಮಂಗಳೂರಿನ ರೌಡಿ ಶೀಟರ್ ನೌಪಲ್ ನದ್ದು; ಕೊಲೆಯೆಂಬ ಶಂಕೆ, ತೀವ್ರಗೊಂಡ ತನಿಖೆ


 ಉಪ್ಪಳ: ಇಲ್ಲಿನ ರೈಲ್ವೇ ಗೇಟು ಬಳಿ ನಿಗೂಢ ರೀತಿಯಲ್ಲಿ ಕಂಡು ಬಂದ ಮೃತದೇಹ ಮಂಗಳೂರಿನ ಕುಖ್ಯಾತ ರೌಡಿ ಟೋಪಿ ನೌಫಲ್(38) ನದ್ದು ಎಂದು ತಿಳಿದು ಬಂದಿದೆ.ಈತ ಮಂಗಳೂರು ಕಮಿಷನರ್ ವಿವಿದ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 25 ಕ್ಕೂ ಹೆಚ್ಚು ಕೇಸುಗಳನ್ನು ಹೊಂದಿದ್ದನೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಯಾರೋ ಕೊಲೆ ಮಾಡಿರಬೇಕು ಎಂಬ ಶಂಕೆಯೂ ಉಂಟಾಗಿದೆ. 

    ಮಂಗಳೂರು ಬಜಾಲ್ ಫೈಸಲ್ ನಗರ ನಿವಾಸಿಯಾದ  ಟೋಪಿ ನೌಫಾಲ್ ಫರಂಗಿಪೇಟೆಯ ಅವಳಿ ಕೊಲೆ ಸಹಿತ 25 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಮಂಗಳೂರಿನಲ್ಲಿ ಡ್ರಗ್ಸ್ ವ್ಯಾಪಾರಿಯಾಗಿದ್ದನು. ಇತ್ತೀಚೆಗೆ ಮಂಗಳೂರು ಪೊಲೀಸರು ಡ್ರಗ್ಸ್ ಮಾರಾಟ ವಿರುದ್ದ ಕಾರ್ಯಾಚರಣೆ ತೀವ್ರಗೊಳಿಸಿದಾಗ ಈತ ಕಾಸರಗೋಡು ಭಾಗಕ್ಕೆ ಪರಾರಿಯಾಗಿದ್ದನು.

  ಇಂದು ಬೆಳಗ್ಗೆ ಉಪ್ಪಳ ರೈಲ್ವೇ ಗೇಟು ಬಳಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು.ಮೃತದೇಹದ ಫ್ಯಾಂಟಿನ ಕಿಸೆಯಲ್ಲಿ ಸಿರಿಂಜು, ಬೀಗದ ಕೈ ಪತ್ತೆಯಾಗಿತ್ತು. ಶರ್ಟ್ ತೆಗೆದಿಸಲಾಗಿದ್ದು ಬನಿಯನ್ ಹಾಕಲಾಗಿತ್ತು. ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಯಿತು

Post a Comment

0 Comments