ಬದಿಯಡ್ಕ: ಆಹಾರ ವಸ್ತು, ಆರೋಗ್ಯ ವಿಮೆ ಎಂಬಿವು ಉಚಿತವಾಗಿ ನೀಡಿ ಕೇರಳ ಸಹಿತ ರಾಜ್ಯಗಳನ್ನು ಬಡತನ ಮುಕ್ತವಾಗಿಸಿದ ಕ್ರೆಡಿಟ್ ನರೇಂದ್ರ ಮೋದಿ ಸರಕಾರದ್ದಾಗಿದೆಯೆಂದು ಬಿಜೆಪಿ ರಾಜ್ಯ ವಕ್ತಾಎ ಅಡ್ವ.ಪಿ.ಪಿ.ಶ್ರೀಪದ್ಮನಾಭನ್ ಹೇಳಿದರು. ಅವರು ವಿಕಸಿತ ಬದಿಯಡ್ಕ ಪಂಚಾಯತು ಸಂಗಮ ಉದ್ಗಾಟಿಸಿ ಈ ರೀತಿ ಹೇಳಿದರು
ಕೇರಳದ ಗ್ರಾಮೀಣ ವಲಯದಲ್ಲಿ ಉತ್ತಮ ರಸ್ತೆಗಳ ನಿರ್ಮಾಣವು ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಿಂದಾಗಿದೆ. ಜಲಜೀವಮ್ ಮಿಶನ್ ಮೂಲಕದ ಕುಡಿನೀರು ವಿತರಣೆ, ಉಚಿತ ವಿದ್ಯುತ್ ಸಂಪರ್ಕ, ಸ್ವಚ್ಚಭಾರತ್ ಮೂಲಕ ತ್ಯಾಜ್ಯ ಸಂಸ್ಕರಣೆ, ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ವಸತಿ ನಿರ್ಮಾಣ ಯೋಜನೆ ಎಂಬಿವು ಜಾರಿಗೊಳಿಸುವಲ್ಲಿ ರಾಜ್ಯ ಸರಕಾರ ವಿಫಲಗೊಂಡಿದೆ ಎಂದವರು ಹೇಳಿದರು.
ಜಯರಾಮ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದರು. ವಿಕಸಿತ ಕೇರಳ, ವಿಕಸಿತ ಪಂಚಾಯತು ಪ್ರತಿಜ್ಞೆ ನಡೆಸಲಾಯಿತು.
ಬಿಜೆಪಿ ರಾಜ್ಯ ಸೆಲ್ ಸಂಯೋಜಕ ವಿ.ಕೆ.ಸಜೀವನ್, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಜಯಂತಿ ಶೆಟ್ಟಿ, ಅಶ್ವಿನಿ ಕೆ.ಎಂ, ಪ್ರೇಮಕುಮಾರಿ, ಮಹೇಶ್ ವಳಕಮಜ,ಆನಂದ ಕೆ.ಮೊದಲಾದವರು ಮಾತನಾಡಿದರು

0 Comments